ಅಂಕೋಲಾದ ಸಜ್ಜನ್ ರಾಜಕಾರಣಿ, ದಲಿತ ನಾಯಕ ಅಶೋಕ ಶೇಡಗೇರಿ ಇನ್ನಿಲ್ಲ.
ಅಂಕೋಲಾ ಪುರಸಭೆಯ ವಾರ್ಡ್ ಸಂಖ್ಯೆ 8ರ ಮಾಜಿ ಸದಸ್ಯರು, ಸದಾ ಜನಪರ ಚಿಂತನೆಯುಳ್ಳ ಸಜ್ಜನ್ ರಾಜಕಾರಣಿ ಹಾಗೂ ಪ್ರಮುಖ ದಲಿತ ನಾಯಕರಾಗಿದ್ದ ಅಶೋಕ ಮಂಗೇಶ ಶೇಡಗೇರಿ ಅವರು ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಹಠಾತ್ ನಿಧನರಾಗಿದ್ದಾರೆ..
ನಿನ್ನೆ ದಿನಾಂಕ 7/07/2026ರ ರಾತ್ರಿ ಸಂಭವಿಸಿದ ಇವರ ಈ ಆಕಸ್ಮಿಕ ಅಗಲಿಕೆ ಅವರ ಕುಟುಂಬಕ್ಕೆ ಅಶೋಕ ಸಾಗರದಲ್ಲಿ ಮುಳುಗಿಸಿದೆ.ಅಶೋಕ ಶೇಡಗೇರಿ ಅವರು ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತರಾಗದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕೆಂದು ಶ್ರಮಿಸಿದ ಅಪರೂಪದ ನಾಯಕರಾಗಿದ್ದರು. ಸಾರ್ವಜನಿಕ ಜೀವನದಲ್ಲಿ ಅತ್ಯಂತ ಸರಳತೆ ಮೈಗೂಡಿಸಿಕೊಂಡಿದ್ದ ಇವರು, ವಾರ್ಡ್ 8ರ ಪ್ರತಿನಿಧಿಯಾಗಿ ಅಂಕೋಲಾ ಪುರಸಭೆಯಲ್ಲಿ ಜನಸಾಮಾನ್ಯರ ಧ್ವನಿಯಾಗಿದ್ದರು.
ದಲಿತ ಸಮುದಾಯದ ಹಕ್ಕುಗಳಿಗಾಗಿ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ಇವರು, ಪ್ರತಿ ವರ್ಷ ಅಂಬೇಡ್ಕರ್ ಜಯಂತಿಯನ್ನು ಅತ್ಯಂತ ಸಡಗರ ಹಾಗೂ ಅರ್ಥಪೂರ್ಣವಾಗಿ, ಕಾಯಂ ಆಗಿ ಆಚರಿಸಿಕೊಂಡು ಬರುವ ಮೂಲಕ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿದ್ದರು.ಅವರೊಬ್ಬ ಬಹುಮುಖ ಪ್ರತಿಭೆಯಾಗಿದ್ದರು ಎಂಬುದಕ್ಕೆ ಈ ಹಿಂದೆ ಪುರಸಭೆಯ ಅನೇಕ ಸದಸ್ಯರು ಒಗ್ಗೂಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಿರ್ಮಿಸಿದ್ದ ಸ್ವಚ್ಛತೆ ಕುರಿತಾದ ಕಿರುಚಿತ್ರವೇ ಸಾಕ್ಷಿ. ಆ ಕಿರುಚಿತ್ರದಲ್ಲಿ ಅಶೋಕ ಶೇಡಗೇರಿ ಅವರು ಅತ್ಯುತ್ತಮವಾಗಿ ನಟಿಸುವ ಮೂಲಕ ಕಲಾಭಿಮಾನವನ್ನೂ ಪ್ರದರ್ಶಿಸಿದ್ದರು ಮತ್ತು ಸ್ವಚ್ಛತೆಯ ಸಂದೇಶವನ್ನು ಜನಮನಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಆ ನಟನೆ ಮತ್ತು ಸಾಮಾಜಿಕ ಕಳಕಳಿ ಇಂದಿಗೂ ಜನರ ಮನಸ್ಸಿನಲ್ಲಿ ಹಸಿರಾಗಿದೆ.
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ಸೈಲ್ ಅವರು ನಿನ್ನೆ ಬೆಂಗಳೂರಿನಲ್ಲಿದ್ದರೂ ಸಹ, ತಮ್ಮ ಪುರಸಭೆಯ ಸಹೋದ್ಯೋಗಿ ಅಶೋಕ ಶೇಡಗೇರಿ ಅವರ ಜೀವ ಉಳಿಸಲು ನಿರಂತರವಾಗಿ ಫೋನ್ ಸಂಭಾಷಣೆಯ ಮೂಲಕ ವೈದ್ಯರನ್ನು ಸಂಪರ್ಕಿಸಿ ತೀವ್ರ ಪ್ರಯತ್ನ ನಡೆಸಿದ್ದರು. ಇತ್ತ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಶಂಭು ಶೆಟ್ಟಿ ಅವರು ತಡರಾತ್ರಿವರೆಗೂ ಜಿಲ್ಲಾಸ್ಪತ್ರೆಯಲ್ಲೇ ಮೊಕ್ಕಾಂ ಹೂಡಿ, ಹೆಚ್ಚಿನ ಚಿಕಿತ್ಸೆ ಕೊಡಿಸಿದರೆ ಶೇಡಗೇರಿ ಅವರು ಬದುಕಬಹುದು ಎಂಬ ಆಶಾಭಾವನೆಯಿಂದ ವೈದ್ಯರೊಂದಿಗೆ ಸತತ ಸಂಪರ್ಕದಲ್ಲಿದ್ದರು. ಈ ಕಠಿಣ ಸಂದರ್ಭದಲ್ಲಿ ಪುರಸಭೆಯ ಅನೇಕ ಜನಪ್ರತಿನಿಧಿಗಳು ಸಹ ಜಿಲ್ಲಾ ಆಸ್ಪತ್ರೆಗೆ ಧಾವಿಸಿದ್ದರು. ಅಶೋಕ್ ಶೇಡಗೇರಿ ಯವರನ್ನು ಉಳಿಸುವ ಪ್ರಯತ್ನ ಪಟ್ಟರು ಕೂಡ ವಿಧಿ ಕೈ ಕೊಟ್ಟಿತ್ತು.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಂಕೋಲಾದಾದ್ಯಂತ ತೀವ್ರ ಕಂಬನಿ ವ್ಯಕ್ತವಾಗಿದೆ. ಸಮಾಜಮುಖಿ ನಾಯಕನ ನಿಧನಕ್ಕೆ ಮಾನ್ಯ ಸತೀಶ್ ಶೈಲ್ ಶಾಸಕರು ಕಾರವಾರ-ಅಂಕೋಲಾ ವಿಧಾನ ಸಭಾ ಕ್ಷೇತ್ರ.ಶಂಬು ಶೆಟ್ಟಿ. ಕಾಂಗ್ರೆಸ್ ಜಿಲ್ಲಾ ವಕ್ತಾರರು .ವಿನೋದ್ ನಾಯಕ್. ಜಗದೀಶ್ ಖಾರ್ವಿ.. ಪಾಂಡುರಂಗ ಗೌಡ. ಪುರಸಬೆ ಮಾಜಿ ಅಧ್ಯಕ್ಸರು ಸೂರಜ್ ನಾಯ್ಕ್. ಪುರಸಭೆಯ ಮಾಜಿ ಉಪಾಧ್ಯಕ್ಷರಾದ ರೇಖಾ ಗಾಂವಕರ್ ಪುರಸಭೆ ಮಾಜಿ ಸದಸ್ಯ ಸಬ್ಬೀರ್ ಶೇಖ್. ಜಯಪ್ರಕಾಶ್ ನಾಯ್ಕ್. ಶ್ರೀಧರ್ ನಾಯ್ಕ್.ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ. ಅಂಕೋಲಾ ಪುರಸಭೆ ಹಾಗೂ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟುಮಾಡಿರುವ ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ‘ಕ್ರಾಂತಿಕಾರಿ ನ್ಯೂಸ್’ ಪ್ರಾರ್ಥಿಸುತ್ತದೆ.













Leave a Reply