​ಅಂಕೋಲಾ: ಜನಸ್ನೇಹಿ ಹೊನ್ನೇಬೈಲ್ ಪಂಚಾಯತ ಕಾರ್ಯದರ್ಶಿ ಗಣಪತಿ ನಾಯ್ಕ ಹಿಲ್ಲೂರಿಗೆ ವರ್ಗಾವಣೆ.

.​ಅಂಕೋಲಾ: ತಾಲೂಕಿನ ಹೊನ್ನೇಬೈಲ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎಂಟು ವರ್ಷಗಳಿಂದ ಅತ್ಯಂತ ದಕ್ಷ ಹಾಗೂ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್-2 ಕಾರ್ಯದರ್ಶಿ ಗಣಪತಿ ನಾಯ್ಕ ಅವರು ಸ್ವಂತ ಕೋರಿಕೆಯ ಮೇರೆಗೆ ತಾಲೂಕಿನ ಹಿಲ್ಲೂರು ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡಿದ್ದಾರೆ.​

ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (CEO) ದಿಲೀಶ್ ಶಶಿ ಅವರು ಈ ವರ್ಗಾವಣೆ ಆದೇಶವನ್ನು ಹೊರಡಿಸಿದ್ದು, ಅದರಂತೆ ಗಣಪತಿ ನಾಯ್ಕ ಅವರು ಹಿಲ್ಲೂರು ಗ್ರಾಮ ಪಂಚಾಯಿತಿಯ ನೂತನ ಕಾರ್ಯದರ್ಶಿಯಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.​

ಹೊನ್ನೇಬೈಲ ಗ್ರಾಮ ಪಂಚಾಯಿತಿಯಲ್ಲಿ ಸುದೀರ್ಘ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅತ್ಯಂತ ಜನಪ್ರಿಯ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಇವರ ದಕ್ಷ ಹಾಗೂ ಪಾರದರ್ಶಕ ಆಡಳಿತ ವೈಖರಿಯು ಸ್ಥಳೀಯ ಸಾರ್ವಜನಿಕರ ಅಪಾರ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಇವರು ಹಿಲ್ಲೂರಿಗೆ ವರ್ಗಾವಣೆಗೊಂಡಿದ್ದು, ಇವರ ಮುಂದಿನ ಸೇವಾವಧಿಗೆ ನಾಗರಿಕರು ಹಾಗೂ ಗಣ್ಯರು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!