ಅಂಕೋಲಾ: ತಾಲೂಕಿನ ಕೇಣಿ ಗ್ರಾಮದ ಗಾಬಿತವಾಡ ನಿವಾಸಿಯಾದ 19 ವರ್ಷದ ಯುವತಿಯೊಬ್ಬಳು ಕಾಣೆಯಾಗಿರುವ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾಬಿತವಾಡದ ಸೂರ್ಯಕಾಂತ ಚೋಡನಕರ ಎಂಬುವವರ ಪುತ್ರಿ ಸಾಕ್ಷಿ ಕಾಣೆಯಾದ ಯುವತಿಯಾಗಿದ್ದಾಳೆ.
ಈಕೆ ಈ ಹಿಂದೆ ಅಂಕೋಲಾ ನಗರದ ವೈಶ್ಯ ಟ್ರೇಡರ್ಸ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಕಳೆದ ಮೂರ್ನಾಲ್ಕು ತಿಂಗಳಿಂದ ಮನೆಯಲ್ಲೇ ಇದ್ದಳು. ಜೂನ್ 23 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ಅವಧಿಯಲ್ಲಿ ಯಾರಿಗೂ ಹೇಳದೇ ಮನೆಯಿಂದ ತೆರಳಿದವಳು ಇದುವರೆಗೂ ವಾಪಸ್ ಮರಳದೆ ನಾಪತ್ತೆಯಾಗಿದ್ದಾಳೆ.
ಕಾಣೆಯಾದ ಯುವತಿಯು 5 ಅಡಿ 3 ಇಂಚು ಎತ್ತರ, ಗೋಧಿ ಮೈಬಣ್ಣ, ದುಂಡನೆಯ ಮುಖ ಹಾಗೂ ಸದ್ದೃಢ ಮೈಕಟ್ಟು ಹೊಂದಿದ್ದು, ಕನ್ನಡ ಮತ್ತು ಕೊಂಕಣಿ ಭಾಷೆ ಮಾತನಾಡುತ್ತಾಳೆ. ಕಾಣೆಯಾಗುವ ಸಮಯದಲ್ಲಿ ಸ್ಕ್ವೇರ್ ಡಿಸೈನ್ ಇರುವ ಮೂರನ ಬಣ್ಣದ ಟಾಪ್, ಬಿಳಿ ಬಣ್ಣದ ಪ್ಯಾಂಟ್, ವೆಲ್ ಹಾಗೂ ಕುತ್ತಿಗೆಯಲ್ಲಿ ಬೆಳ್ಳಿ ಸರ ಧರಿಸಿದ್ದಾಳೆ ಎಂದು ತಿಳಿದುಬಂದಿದೆ. ಯುವತಿಯ ತಾಯಿ ಸುಮಾ ಚೋಡನಕರ ನೀಡಿದ ದೂರಿನನ್ವಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಗುರುನಾಥ ಹಾದಿಮನಿ ಅವರ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ. ಈ ಚಹರೆುಳ್ಳ ಯುವತಿಯ ಬಗ್ಗೆ ಯಾವುದೇ ಮಾಹಿತಿ ಲಭಿಸಿದಲ್ಲಿ ಸಾರ್ವಜನಿಕರು ತಕ್ಷಣ ಅಂಕೋಲಾ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08388-220333 ಅಥವಾ ಮೊಬೈಲ್ ಸಂಖ್ಯೆ 9480805250 / 9480805268 ಗೆ ಸಂಪರ್ಕಿಸಿ ಮಾಹಿತಿ ನೀಡಲು ಕೋರಲಾಗಿದೆ.













Leave a Reply