ಅಂಕೋಲಾ :ಕರ್ನಾಟಕ ರತ್ನ, ಅಭಿನಯ ಚಕ್ರವರ್ತಿ ಡಾ. ಪುನೀತ್ ರಾಜಕುಮಾರ್ ಅವರ ಐದನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಅಂಕೋಲಾದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಜನಪರ ವೇದಿಕೆ ಅಂಕೋಲಾ ಇವರ ವತಿಯಿಂದ ರೋಗಿಗಳಿಗೆ ಹಾಲು ಮತ್ತು ಹಣ್ಣು ವಿತರಿಸುವ ಅರ್ಥಪೂರ್ಣ ಕಾರ್ಯಕ್ರಮ ಜರುಗಿತು.
ದಿನಾಂಕ 29/10/2026ರಂದು ಮಧ್ಯಾಹ್ನ ಸರಿಯಾಗಿ 12 ಗಂಟೆಗೆ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು ಹಾಗೂ ಹಣ್ಣುಗಳನ್ನು ವಿತರಿಸುವ ಮೂಲಕ ಡಾ. ಪುನೀತ್ ರಾಜಕುಮಾರ್ ಅವರ ಸಮಾಜಮುಖಿ ಚಿಂತನೆ ಹಾಗೂ ನೆನಪನ್ನು ಸ್ಮರಿಸಲಾಯಿತು.ಈ ಮಾನವೀಯ ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿಗಳಾದ ಡಾ. ಜಗದೀಶ್ ನಾಯಕ್ ಹಾಗೂ ಆಸ್ಪತ್ರೆಯ ವೈದ್ಯಕೀಯ ಮತ್ತು ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸಿದರು.ಜನಪರ ವೇದಿಕೆಯ ಅಧ್ಯಕ್ಷರಾದ ಮಂಜುನಾಥ್ ನಾಯ್ಕ್ ಬೆಳಂಬಾರ, ಉಪಾಧ್ಯಕ್ಷರಾದ ಪಾಂಡುರಂಗ ಕೃಷ್ಣ ನಾಯ್ಕ್, ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ್ ತೆಂಕಣಕೇರಿ, ಖಜಾಂಚಿ ರಾಘವೇಂದ್ರ ಲೋಕಪ್ಪ ನಾಯ್ಕ್ ಬೆಳಂಬಾರ ಹಾಗೂ ಸಹ ಕಾರ್ಯದರ್ಶಿ ವಿಘ್ನೇಶ್ವರ ಉಮೇಶ್ ನಾಯ್ಕ್ ಅವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
.ಇದೇ ಸಂದರ್ಭದಲ್ಲಿ ವೇದಿಕೆಯ ಪ್ರಮುಖ ಸದಸ್ಯರುಗಳಾದ ಈಶ್ವರ್ ನಾಯ್ಕ್ ಮಂಜುಗುಣಿ, ಈಶ್ವರ್ ನಾಯ್ಕ್ ಅಜ್ಜಿಕಟ್ಟಾ, ಮಂಜುನಾಥ್ ನಾಯ್ಕ್ ಬೆಳಂಬಾರ ಸೇರಿದಂತೆ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
✍️ಕ್ರಾಂತಿಕಾರಿ ನ್ಯೂಸ್. ಅಂಕೋಲಾ












Leave a Reply