ಅಂಕೋಲಾ: ಶಿರಸಿಯ ಆಸ್ಪತ್ರೆಗೆ ಹೋದ ಅಸಳ್ಳಿಯ 18 ವರ್ಷದ ಯುವತಿ ನಾಪತ್ತೆ; ಪೊಲೀಸ್ ದೂರು ದಾಖಲು.

ಅಂಕೋಲಾ: ತಾಲೂಕಿನ ಕುಂಟಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸಳ್ಳಿಯ ನಿವಾಸಿಯಾದ ಯುವತಿಯೊಬ್ಬಳು ಕಾಣೆಯಾಗಿರುವ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಸಳ್ಳಿಯ ಈಶ್ವರ ಗೌಡ ಎಂಬುವವರ 18 ವರ್ಷದ ಪುತ್ರಿ ಶ್ರೀದೇವಿ ಕಾಣೆಯಾದ ಯುವತಿಯಾಗಿದ್ದಾಳೆ. ಈಕೆ ಜೂನ್ 24 ರಂದು ಬೆಳಿಗ್ಗೆ ಶಿರಸಿಯ ಟಿ.ಎಸ್.ಎಸ್. ಆಸ್ಪತ್ರೆಗೆ ತಾಯಿಯ ಮಾತ್ರೆಗಳನ್ನು ತರಲು ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದು, ಇದುವರೆಗೂ ವಾಪಸ್ ಮನೆಗೆ ಮರಳದೆ ನಾಪತ್ತೆಯಾಗಿದ್ದಾಳೆ.

ಕಾಣೆಯಾದ ಯುವತಿಯು 5 ಅಡಿ 3 ಇಂಚು ಎತ್ತರ, ಗೋಧಿ ಮೈಬಣ್ಣ, ಉದ್ದನೆಯ ಮುಖ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾಗುವ ಸಮಯದಲ್ಲಿ ಹೂವಿನ ಡಿಸೈನ್ ಇರುವ ಬಿಳಿ ಬಣ್ಣದ ಟಾಪ್, ಕಪ್ಪು ಬಣ್ಣದ ಪ್ಯಾಂಟ್, ವೇಲ್ ಹಾಗೂ ಮಣಿ ಸರ ಧರಿಸಿದ್ದಾಳೆ ಎಂದು ತಿಳಿದುಬಂದಿದೆ.

ಯುವತಿಯ ಸಹೋದರ ಪರಮೇಶ್ವರ ಗೌಡ ನೀಡಿದ ದೂರಿನನ್ವಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಗುರುನಾಥ ಹಾದಿಮನಿ ಅವರ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ. ಈ ಚಹರೆ ಯುಳ್ಳ ಯುವತಿಯ ಬಗ್ಗೆ ಯಾವುದೇ ಮಾಹಿತಿ ಲಭಿಸಿದಲ್ಲಿ ಸಾರ್ವಜನಿಕರು ತಕ್ಷಣ ಅಂಕೋಲಾ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08388-220333 ಅಥವಾ ಮೊಬೈಲ್ ಸಂಖ್ಯೆ 9480805250 / 9480805268 ಗೆ ಸಂಪರ್ಕಿಸಿ ಮಾಹಿತಿ ನೀಡಲು ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!