ದೈಹಿಕ ಕ್ಷಮತೆ ಕಳೆದುಕೊಂಡು ನಿತ್ರಾಣಗೊಂಡ ನಾಗರಾಜ ನಾಯಕ: 5 ದಿನ ಅನ್ನ- ಆಹಾರ ತ್ಯಜಿಸಿ ಹೋರಾಟ ಮುಂದುವರಿಕೆ.

ದೈಹಿಕ ಕ್ಷಮತೆ ಕಳೆದುಕೊಂಡು ನಿತ್ರಾಣಗೊಂಡ ನಾಗರಾಜ ನಾಯಕ: 5 ದಿನ ಅನ್ನ- ಆಹಾರ ತ್ಯಜಿಸಿ ಹೋರಾಟ ಮುಂದುವರಿಕೆ.

ಅಂಕೋಲಾ: ಗೃಹ ಸಚಿವರು ಅಹವಾಲು ಆಲಿಸಿ, ತಾಲ್ಲೂಕಿನಲ್ಲಿ ನಡೆಯುತ್ತಿರುವ ದುರುವರ್ತನೆಗಳನ್ನು ನಿಯಂತ್ರಿಸಲು ಆಗ್ರಹಿಸಿ ಖ್ಯಾತ ನ್ಯಾಯವಾದಿ ನಾಗರಾಜ ನಾಯಕ ನಡೆಸುತ್ತಿರುವ ಧರಣಿ ಸತ್ಯಾಗ್ರಹ 7ದಿನಕ್ಕೆ ಕಾಲಿಟ್ಟಿದೆ. 5 ದಿನಗಳಿಂದ ಅವರು ಅನ್ನ- ಆಹಾರ ತೆಗೆಸಿ ಪ್ರತಿಭಟನೆ ಮಾಡುತ್ತಿದ್ದು ದೈಹಿಕ ಕ್ಷಮತೆ ಕಳೆದುಕೊಂಡು ಸಂಪೂರ್ಣವಾಗಿ ನಿತ್ರಾಣರಾಗಿದ್ದಾರೆ.

ಅವರ ಬೆಂಬಲಿಗರು ಹಾಗೂ ವಿವಿಧ ಕ್ಷೇತ್ರದ ಮುಖಂಡರು ಅನ್ನ ಆಹಾರ ಸ್ವೀಕರಿಸಿ ಪ್ರತಿಭಟನೆ ಮುಂದುವರಿಸಿ ಎನ್ನುವ ಸಲಹೆ ನೀಡಿದರಾದರೂ ಅದನ್ನು ನಯವಾಗಿ ತಿರಸ್ಕರಿಸಿ ಬೇಡಿಕೆ ಈಡೇರುವವರೆಗೆ, ತಾಲ್ಲೂಕಿನ ಜನತೆಗಾಗಿ ಜನಸಾಮಾನ್ಯರ ಒಳಿತಿಗಾಗಿ ಪ್ರತಿಭಟನೆ ಮುಂದುವರಿಸುತ್ತೇನೆ ಎನ್ನುತ್ತಿದ್ದಾರೆ. ಆದರೆ ಅವರು ನಿತ್ರಾಣಗೊಂಡಿದ್ದು, ಚಿಕಿತ್ಸೆ ಪಡೆಯದೆ ಧರಣಿ ಮುಂದುವರಿಸುತ್ತಿದ್ದಾರೆ.

5 ದಿನಗಳಿಂದ ಘನ ಆಹಾರವನ್ನು ತ್ಯಜಿಸಿದ ಪರಿಣಾಮ ಮುಖದ ಕಳೆಗುಂದಿದೆ. ಕಣ್ಣುಗಳು ಕೆಂಪಾಗಿವೆ. ಸರ್ಕಾರ ಮತ್ತು ಜಿಲ್ಲಾಡಳಿತ ಅವರ ಬೇಡಿಕೆಗಳನ್ನು ಈಡೇರಿಸುವತ್ತ ಗಮನಹರಿಸಬೇಕೆಂದು ಬೆಂಬಲಿಗರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ಪರಿಣಾಮಗಳಿಗೆ ಸರ್ಕಾರವೇ ಹೊಣೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!