ಅಂಕೋಲಾ: ತಾಲೂಕಿನ ಹಾರವಾಡ ಗಾಬಿತ್‌ವಾಡ ಸಮೀಪದ ಅರಬ್ಬಿ ಸಮುದ್ರದಲ್ಲಿ ಸಂಭವಿಸಿದ ಅನಿರೀಕ್ಷಿತ ದುರಂತದಲ್ಲಿ ದೋಣಿ ಮುಳುಗಿ ಮೀನುಗಾರರೊಬ್ಬರು ಮೃ.. ತಪ. ಟ್ಟಿದ್ದಾರೆ. ಹಾರವಾಡ ಗಾಬಿತ್‌ವಾಡ ಗ್ರಾಮದ ನಿವಾಸಿ ಸಹದೇವ (ರಾಜೇಶ್) ಮೆಥಾ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರು.ಮೀನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಸಹದೇವ ಅವರು, ಎಂದಿನಂತೆ ತಮ್ಮ ದೈನಂದಿನ ಕಾಯಕಕ್ಕಾಗಿ ‘ಶ್ರೀ ಮಾತಾ ಭವಾನಿ’ ಹೆಸರಿನ ದೋಣಿಯಲ್ಲಿ ಸಮುದ್ರಕ್ಕೆ ಇಳಿದಿದ್ದರು. ಆದರೆ, ಅರಬ್ಬಿ ಸಮುದ್ರದ ಮಧ್ಯೆ ಅನಿರೀಕ್ಷಿತವಾಗಿ ದೋಣಿ ಅಪಘಾತಕ್ಕೀಡಾಗಿ ನೀರಿನಲ್ಲಿ ಮುಳುಗಿದೆ. ಘಟನೆಯಲ್ಲಿ ದೋಣಿಯಲ್ಲಿದ್ದ ಸಹದೇವ ಅವರು ನೀರಿನಲ್ಲಿ ಮುಳುಗಿ ಪ್ರಾ.ಣ ಕಳೆದುಕೊಂಡಿದ್ದಾರೆ.
ಸಮುದ್ರದಲ್ಲಿ ದೋಣಿ ಮುಳುಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ತಕ್ಷಣವೇ, ಅಕ್ಕಪಕ್ಕದಲ್ಲಿದ್ದ ಇತರ ಮೀನುಗಾರರು ತಕ್ಷಣ ಕಾರ್ಯಪ್ರವೃತ್ತರಾಗಿ ಸಹದೇವ ಅವರನ್ನು ನೀರಿನಿಂದ ಹೊರತೆಗೆದು ದಡಕ್ಕೆ ತಂದಿದ್ದಾರೆ. ಆದರೆ, ದುರದೃಷ್ಟವಶಾತ್ ದಡಕ್ಕೆ ತರುವಷ್ಟರಲ್ಲಿಯೇ ಅವರು ಕೊನೆಯುಸಿರೆಳೆದಿದ್ದರು .ಕುಟುಂಬದ ಆಧಾರಸ್ತಂಭವಾಗಿದ್ದ ಇವರ ಅಗಲಿಕೆಯಿಂದ ಹಾರವಾಡ ಗಾಬಿತ್‌ವಾಡ ಗ್ರಾಮದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.













Leave a Reply