ಅಂಕೋಲಾದ ಹನುಮಟ್ಟಾದಲ್ಲಿ ವರ್ಧಂತಿ ಉತ್ಸವದ ಸಂಭ್ರಮ: ಇಂದು ‘ಕರುಳ ಬಳ್ಳಿ ಹಾವಾಯಿತು’ ನಾಟಕ ಪ್ರದರ್ಶನ​.

ಅಂಕೋಲಾ ತಾಲ್ಲೂಕಿನ ವಂದಿಗೆಯ ಹನುಮಟ್ಟಾದಲ್ಲಿರುವ ಶ್ರೀ ಜಟಗ ದೇವಸ್ಥಾನದಲ್ಲಿ ಶ್ರೀ ನಾಗ ಚಾಮುಂಡೇಶ್ವರಿ, ಮಹಾಸತಿ ಹಾಗೂ ಪರಿವಾರ ದೇವರುಗಳ 14ನೇ ವರ್ಷದ ವರ್ಧಂತಿ ಉತ್ಸವವನ್ನು ಅತ್ಯಂತ ಸಡಗರದಿಂದ ಆಯೋಜಿಸಲಾಗಿದೆ.

ಈ ಧಾರ್ಮಿಕ ಕಾರ್ಯಕ್ರಮದ ವಿಶೇಷ ಅಂಗವಾಗಿ ಏಪ್ರಿಲ್ 21, 2026ರ ಮಂಗಳವಾರ ರಾತ್ರಿ 10:30ಕ್ಕೆ ‘ಕರುಳ ಬಳ್ಳಿ ಹಾವಾಯಿತು’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕವು ಮೋಹನ ನಾಯ್ಕ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಕೌಟುಂಬಿಕ ಸಂಬಂಧಗಳ ನಡುವಿನ ಸಂಘರ್ಷ ಮತ್ತು ಸಾಮಾಜಿಕ ವಾಸ್ತವದ ಚಿತ್ರಣವನ್ನು ಒಳಗೊಂಡಿದೆ.

ರಂಗಭೂಮಿಯ ನುರಿತ ಕಲಾವಿದರು ಈ ನಾಟಕದಲ್ಲಿ ಅಭಿನಯಿಸುತ್ತಿದ್ದು, ಹನುಮಟ್ಟಾದ ದೇವಸ್ಥಾನದ ಆವರಣವು ಈ ಕಲಾ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ವರ್ಧಂತಿ ಉತ್ಸವದ ಅಂಗವಾಗಿ ನಡೆಯುವ ಈ ಪ್ರದರ್ಶನವು ಜನರಲ್ಲಿ ಸತ್ಚಿಂತನೆ ಮೂಡಿಸುವ ಉದ್ದೇಶವನ್ನು ಹೊಂದಿದ್ದು, ಅಂಕೋಲಾ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!