ನಾಗರಾಜ ನಾಯಕರನ್ನು ಆಹ್ವಾನಿಸಿದ್ದು ನಾವೇ: ವಂದಿಗೆ ಗ್ರಾಮದ ಸಂಘಟಕರ ಸಮಜಾಯಿಸಿ.

ಅಂಕೋಲಾ: ಮೇ 6ರಂದು ವಂದಿಗೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ನಾಗರಾಜ ನಾಯಕರನ್ನು ಊರಿನ ಸಂಘಟಕರಾದ ನಾವೇ ಆಹ್ವಾನಿಸಿದ್ದೇವೆಯೇ ಹೊರತು ಅವರಾಗಿಯೇ ಬಂದಿಲ್ಲ ಎಂದು ವಂದಿಗೆ ಗ್ರಾಮಸ್ಥರು ಅಂಕೋಲಾ ಪೊಲೀಸ್ ಠಾಣೆಯ ಸಿಪಿಐಗೆ ಪತ್ರದ ಮೂಲಕ ಸಮಾಜಸಿ ನೀಡಿದರು.ಕಾರವಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೋಪಾಲಕೃಷ್ಣ ರಾಮಚಂದ್ರ ನಾಯಕ ಕರೆದ ಪತ್ರಿಕಾಗೋಷ್ಠಿಯಲ್ಲಿ ನಾಗರಾಜ ನಾಯಕರನ್ನು ವಂದಿಗೆಯವರು ಕರೆದಿದ್ದೆ ಇಲ್ಲ ಎನ್ನುವ ಸುಳ್ಳು ಹೇಳಿಕೆ ನೀಡಿದ್ದಕ್ಕೆ ಗ್ರಾಮಸ್ಥರು ಲಿಖಿತ ಸಮಜಾಯಿಸಿ ನೀಡಿದರು.

ಮೇ 6 ರಂದು ದಿವಂಗತರಾದ 65 ಕಲಾವಿದರ ನೆನಪಿನಲ್ಲಿ ಯಕ್ಷಗಾನ ಕಾರ್ಯಕ್ರಮ ಆಯೋಜಿಸಿದ್ದು ಆ ಕಾರ್ಯಕ್ರಮದ ಉದ್ಘಾಟನೆಗೆ ಯಕ್ಷಗಾನದ ಕಲಾವಿದರನ್ನು ಕರೆಯಬೇಕೆಂದು ನಾವೇ ನಿರ್ಧರಿಸಿದ್ದು, ಆ ಪ್ರಕಾರ ಡಾ. ಶಿವಾನಂದ ನಾಯಕ, ನ್ಯಾಯವಾದಿ ನಾಗರಾಜ ನಾಯಕ ಮತ್ತು ಬೊಮ್ಮಯ್ಯ ಗಾಂವಕರ ಅವರನ್ನು ಆಹ್ವಾನಿಸಿದ್ದೆವು. ಅದಕ್ಕೆ ಪೂರ್ವದಲ್ಲಿಯೇ ಈ ಅತಿಥಿಗಳನ್ನು ಕರೆಯುವುದು ಎಂದು ಸಂಘಟಕರು ನಿರ್ಧಾರ ಮಾಡಿ ನಾಗರಾಜ ನಾಯಕರಿಗೆ ಆಹ್ವಾನ ನೀಡುವ ಜವಾಬ್ದಾರಿಯನ್ನು ಗ್ರಾಮದ ಗಣಪತಿ ವಿಠೋಬ ನಾಯಕರಿಗೆ ನೀಡಲಾಗಿತ್ತು. ಈ ಮಧ್ಯದಲ್ಲಿ ಸಂಘಟನೆಯ ನಿರ್ಧಾರವಾದ ನಂತರ ಮಂಜುನಾಥ ಗಣಪತಿ ನಾಯಕ, ನಾರಾಯಣ ಹರೀಶ ನಾಯಕ ಮತ್ತು ಸೂರಜ ಹಮ್ಮಣ್ಣ ನಾಯಕ ಬಂದು ಮೊದಲು ನಾಗರಾಜ ನಾಯಕರನ್ನು ಕರೆಯುವುದೇ ಬೇಡ ಎಂದೂ, ಆಮೇಲೆ ನಾಗರಾಜ ನಾಯಕರನ್ನು ಕರೆದರೆ ಗೋಪಾಲಕೃಷ್ಣ ನಾಯಕರನ್ನು ಕರೆಯಬೇಕಾಗುತ್ತದೆ ಎಂದು ಇಲ್ಲವಾದಲ್ಲಿ ಸಮಸ್ಯೆಯಾಗಬಹುದು ಎಂತಲೂ ಹೇಳಿದ್ದರು. ಸಂಘಟನೆಯವರಾದ ನಾವೆಲ್ಲ ತೆಗೆದುಕೊಂಡ ನಿರ್ಧಾರವನ್ನು ಹಿಂಪಡೆಯುವುದಿಲ್ಲ ಎಂದು ನಾಗರಾಜ ನಾಯಕರಿಗೆ ಗಣಪತಿ ನಾಯಕರ ಮುಖಾಂತರ ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು. ಅವರು ನಮ್ಮೂರಿನ ಹಿತೈಷಿಗಳು ಹಾಗೂ ಎಲ್ಲರಿಗೂ ಬೇಕಾದವರು ಎಂದು ಗ್ರಾಮಸ್ಥರು ಸಮಜಾಯಿಸಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!