ರೋಟರಿ ವೊಕೇಶನಲ್ ಅವಾರ್ಡ್ ಸನ್ಮಾನ

ಅಂಕೋಲಾ : ಸಮಾಜದಲ್ಲಿ ಎಲೆಯ ಮರೆಯ ಕಾಯಿಯಂತೆ ವೃತ್ತಿಯನ್ನು ಮಾಡುತ್ತಾ ಸಮಾಜದ ಮನ್ನಣೆಗಳಿಸಿದ ವ್ಯಕ್ತಿಗಳಿಗೆ ಅಂಕೋಲಾ ರೂರಲ್ ರೋಟರಿ ಕ್ಲಬ್ ವತಿಯಿಂದ ವೊಕೇಶನಲ್ ಅವಾರ್ಡ್ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಅಧ್ಯಕ್ಷರಾದ ಶ್ರೀಮತಿ. ಪುಷ್ಪಲತಾ ನಾಯಕ ಸಮಾಜದಲ್ಲಿ ಉಳ್ಳವರಿಗೆ ಸನ್ಮಾನ ಮಾಡುವುದು ಸಹಜ, ಆದರೆ ನಮ್ಮ ರೋಟರಿ ಸಂಸ್ಥೆ ನಿಸ್ಕಾಮ ಮನಸ್ಸಿನಿಂದ ವೃತ್ತಿ ಮಾಡುತ್ತಿರುವವರನ್ನು ಗುರುತಿಸಿ ಸನ್ಮಾನ ಮಾಡುತ್ತಿದ್ದೇವೆ ಎಂದರು.

ಶಿವಾನಂದ ರಾಮಾ ಗೌಡ ( ಪೋಸ್ಟ್ ಮನ್ ), ನಾಗೇಂದ್ರ ಬುದ್ಧು ಗೌಡ ( ವಂದಿಗೆ ಗ್ರಾಮ ಪಂಚಾಯತ್ ಸಿಬ್ಬಂದಿ ), ನಾರಾಯಣ ಅರ್ಗೇಕರ್ ( ಟೆಂಪೋ ಸ್ಟ್ಯಾಂಡ್), ಕಿರಣ್ ನಾಯ್ಕ ( ಕೆ ಈ ಬಿ ಲೈನ್ ಮನ್ ), ನಿತ್ಯಾನಂದ ವಿಷ್ಣು ನಾಯ್ಕ ( ಪುರಸಭೆ ಸಿಬ್ಬಂದಿ ) ಹಾಗೂ ಕೃಷ್ಣಮೂರ್ತಿ ಎಂ. ನಾಯ್ಕ್ ( ದ್ವಿಚಕ್ರ ವಾಹನ ದುರಸ್ತಿ ಮಾಡುವ ಮೆಕ್ಯಾನಿಕ್ ) ಇವರನ್ನೆಲ್ಲ ಅಂಕೋಲಾ ರೂರಲ್ ರೋಟರಿ ವೊಕೇಶನಲ್ ಅವಾರ್ಡ್ ನೀಡಿ ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಶಿವಾನಂದ ಗೌಡಾ ಮಾತನಾಡಿ ನಮ್ಮೆಲ್ಲರ ಜೀವನದಲ್ಲಿ ಸನ್ಮಾನ ಅನ್ನುವುದು ಆಗುತ್ತೆ ಅಂತಾ ಎಂದೂ ಸಹ ನಾವು ತಿಳಿದಿರಲಿಲ್ಲ, ಆದರೆ ರೋಟರಿ ಸಂಸ್ಥೆಯವರು ನಮಗೆಲ್ಲ ಸನ್ಮಾನ ಮಾಡಿದ್ದು ಹೆಮ್ಮೆ ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದರು.ದಂತ ವೈದ್ಯ ಡಾ.ಸಂಜು ನಾಯಕ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಹಿರಿಯ ರೋಟರಿ ಸದಸ್ಯರಾದ ತುಳಸಿದಾಸ ಕಾಮತ್ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರೋಟರಿ ಸದಸ್ಯರಾದ ಶಿವಾನಂದ ನಾಯಕ, ಸಂತೋಷ ಕೇಣಿಕರ್, ಕೌಸ್ತುಭ ನಾಯಕ, ವಿನಾಯಕ ಕಾಮತ, ಸಂಜೀವ್ ನಾಯಕ, ಪ್ರವೀಣ ಶೆಟ್ಟಿ, ರಾಘು ಭಟ್ ಮುಂತಾದವರು ಉಪಸ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!