​ನ್ಯಾಯಾಂಗ ವ್ಯವಸ್ಥೆ ಮತ್ತು ತಾಲೂಕು ಆಡಳಿತಕ್ಕೆ ಬಹಿರಂಗ ಸವಾಲು: ಅಂಕೋಲಾದ ಹೊನ್ನೇಬೈಲ್‌ನಲ್ಲಿ ತಾಯಿ-ಮಗನ ದರ್ಪಕ್ಕೆ ಬ್ರೇಕ್ ಇಲ್ಲವೇ?

ತಾಯಿ -ಮಗ ಸಾರ್ವಜನಿಕ ರಸ್ತೆಗೆ ಪದೇ ಪದೇ ಕಲ್ಲನ್ನು ಹಾಕಿ ತೊಂದರೆ ನೀಡುತ್ತಿದ್ದು.. ಶಾಂತಿಭಂಗ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

​ಅಂಕೋಲಾ: ತಾಲೂಕಿನ ಹೊನ್ನೇಬೈಲ್ ಗ್ರಾಮದಲ್ಲಿ ಮಂಗಲಾ ಮೋಹನ್ ನಾಯ್ಕ ಹಾಗೂ ಆಕೆಯ ಮಗ ಅಮರ್ ನಾಯ್ಕ್ ಎಂಬುವವರ ಕಾನೂನು ಬಾಹಿರ ವರ್ತನೆ ಮತ್ತು ಉದ್ಧಟತನ ಮಿತಿಮೀರಿದೆ. ನಿನ್ನೆ ದಿನಾಂಕ 24/04/2026 ಮಧ್ಯಾಹ್ನವಷ್ಟೇ ಉಪ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ರಸ್ತೆಯಲ್ಲಿದ್ದ ಕಲ್ಲುಗಳನ್ನು ತೆರವುಗೊಳಿಸಿತ್ತು. ಆದರೆ, ಅಧಿಕಾರಿಗಳು ಹೋದ ಬೆನ್ನಲ್ಲೇ ಇಂದು ದಿನಾಂಕ 25/04/2026) ಮತ್ತೆ ರಸ್ತೆಗೆ ಕಲ್ಲುಗಳನ್ನು ಸುರಿದು ದೌರ್ಜನ್ಯ ಮುಂದುವರಿಸುವ ಮೂಲಕ ಆರೋಪಿಗಳು ಕಾನೂನು ಸುವ್ಯವಸ್ಥೆಗೆ ಬಹಿರಂಗ ಸವಾಲು ಹಾಕಿದ್ದಾರೆ.​

ಪೊಲೀಸ್ ಇಲಾಖೆಯ ಕ್ರಮಕ್ಕೆ ಸಾರ್ವಜನಿಕರ ಆಗ್ರಹ:

ಸಾರ್ವಜನಿಕ ರಸ್ತೆ ಬಂದ್ ಮಾಡಿ ದೌರ್ಜನ್ಯ ಎಸಗುತ್ತಿರುವ ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ವಿಳಂಬ ಧೋರಣೆ ಹಾಗೂ ಮೌನ ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಆರೋಪಿಗಳಾದ ತಾಯಿ-ಮಗನ ಮೇಲೆ ಈಗಾಗಲೇ ದಿನಾಂಕ 23/04/2026 ರಂದು ದೂರು ನೀಡಲಾಗಿದ್ದರೂ,ಈವರೆಗೂ ಪೊಲೀಸ್ ಇಲಾಖೆ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದಾಗ “ನಮ್ಮ ವಕೀಲರು ಹೇಳಿದ್ದಾರೆ ಕಲ್ಲು ಹಾಕಲು” ಎಂದು ದರ್ಪ ತೋರಿದ ಅಮರ್ ನಾಯ್ಕ್‌ನನ್ನು ಕೂಡಲೇ ಠಾಣೆಗೆ ಕರೆಸಿ ಕಾನೂನಿನ ರುಚಿ ತೋರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪೊಲೀಸ್ ಇಲಾಖೆಯು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಈ ಬಗ್ಗೆ ಕಠಿಣ ನಿಲುವು ತಳೆದು ದೋಷಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂಬ ನಿರೀಕ್ಷೆ ಸಾರ್ವಜನಿಕರದ್ದಾಗಿದೆ.​

ನ್ಯಾಯಾಲಯದ ಆದೇಶದ ಉಲ್ಲಂಘನೆ:ಮಾನ್ಯ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ (O.S. 125/2024) ವಿಚಾರಣೆಯಲ್ಲಿದ್ದು, ದೂರುದಾರರಾದ ವಿನಾಯಕ ನಾಯ್ಕ ಮತ್ತು ಇತರರನ್ನು ಪ್ರತಿವಾದಿಗಳನ್ನಾಗಿ (4 ರಿಂದ 8) ನ್ಯಾಯಾಲಯವು ಈಗಾಗಲೇ ಪುರಸ್ಕರಿಸಿದೆ.

ಪ್ರಕರಣದಲ್ಲಿ ರಸ್ತೆ ಸಂಚಾರಕ್ಕೆ ಯಾವುದೇ ತಡೆಯಾಜ್ಞೆ ಇಲ್ಲದಿದ್ದರೂ, ಎದುರುದಾರರು ಪದೇ ಪದೇ ದಾರಿ ಬಂದ್ ಮಾಡುತ್ತಿರುವುದು ನ್ಯಾಯಾಂಗ ನಿಂದನೆಯಾಗಿದೆ. ಗೃಹಪ್ರವೇಶದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ನೆಮ್ಮದಿಯಿಂದ ಇರಲು ಬಿಡದೆ, ಮಾನಸಿಕ ಹಿಂಸೆ ನೀಡುತ್ತಿರುವ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಒತ್ತಾಯ ಕೇಳಿಬಂದಿದೆ.​

ಅಕ್ರಮ ಕಟ್ಟಡದ ಕುಮ್ಮಕ್ಕು:ಈ ಎಲ್ಲಾ ಕೃತ್ಯಗಳಿಗೆ ಸರ್ವೆ ನಂಬರ್ 214/6ರಲ್ಲಿ ಪಂಚಾಯತ್ ಪರವಾನಗಿ ಇಲ್ಲದೆ ಅನಧಿಕೃತವಾಗಿ ಮನೆ ನಿರ್ಮಿಸಿದ ಲಕ್ಷ್ಮಿ ಮೋನಪ್ಪ ನಾಯ್ಕ ಎಂಬುವವರ ಕುಮ್ಮಕ್ಕಿದೆ ಎಂಬ ಆರೋಪ ಕೇಳಿಬಂದಿದೆ. ತಾಲೂಕು ಪಂಚಾಯತ್ ನೋಟಿಸ್ ನೀಡಿದ್ದರೂ ಅಕ್ರಮ ಕಟ್ಟಡ ಕಟ್ಟಿ. ಸೋಲಾರ್ ದೀಪದ ಮೂಲಕ ಮನೆಯ ದೀಪವನ್ನು ಬೆಳಗಿಸಿ ವಾಸ್ತವ್ಯವನ್ನು ಹೂಡಿದ್ದಾರೆ. ಇದು ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈ ಅಕ್ರಮದ ಬಗ್ಗೆಯೂ ಅಧಿಕಾರಿಗಳು ತಕ್ಷಣ ಗಮನಹರಿಸಬೇಕಿದೆ.​ತಕ್ಷಣದ ಬಂಧನಕ್ಕೆ ಆಗ್ರಹ:ಕೇವಲ ರಸ್ತೆ ತೆರವುಗೊಳಿಸಿದರೆ ಈ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ. ಕಾನೂನು ಕೈಗೆತ್ತಿಕೊಂಡು ಶಾಂತಿಭಂಗ ಮಾಡುತ್ತಿರುವ ಮಂಗಲಾ ನಾಯ್ಕ ಮತ್ತು ಅಮರ್ ನಾಯ್ಕ್ ಅವರನ್ನು ತಕ್ಷಣವೇ ಬಂಧಿಸಬೇಕು. ಪೊಲೀಸ್ ಇಲಾಖೆಯು ಇವರ ವಿರುದ್ಧ ಎಫ್.ಐ.ಆರ್ (FIR) ದಾಖಲಿಸಿ ಕಠಿಣ ಕ್ರಮ ಜರುಗಿಸುವ ಮೂಲಕ ರಸ್ತೆ ಸಂಚಾರಕ್ಕೆ ಶಾಶ್ವತವಾಗಿ ಅಡೆತಡೆ ಇಲ್ಲದಂತೆ ಮಾಡಬೇಕು. ಶಾಂತಿಪ್ರಿಯ ಅಂಕೋಲಾದಲ್ಲಿ ಈ ರೀತಿಯ ದೌರ್ಜನ್ಯಗಳಿಗೆ ಅವಕಾಶ ನೀಡದಂತೆ ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರರು ದೃಢ ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಸಾರ್ವಜನಿಕರಲ್ಲಿದೆ.

Leave a Reply

Your email address will not be published. Required fields are marked *

error: Content is protected !!