ಅಂಕೋಲಾ ಪುರಸಭೆಯ ಅಭಿವೃದ್ಧಿಗೆ ಸಿಗಲಿದೆಯೇ ವೇಗ?
ಅಂಕೋಲಾ: ಇಲ್ಲಿನ ಪುರಸಭೆಯಲ್ಲಿ ಕಳೆದ ಕೆಲವು ಸಮಯದಿಂದ ಪ್ರಭಾರಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಏಸು ಎಸ್. ಬೆಂಗಳೂರು ಅವರು, ಈಗ ಪೂರ್ಣ ಪ್ರಮಾಣದ (Regular) ಅಧಿಕಾರಿಯಾಗಿ ಅಧಿಕೃತವಾಗಿ ನೇಮಕಗೊಂಡಿದ್ದಾರೆ.

ಸರ್ಕಾರವು ಇವರಿಗೆ KMAS ಗ್ರೇಡ್-1 ಅಧಿಕಾರಿಯಾಗಿ ಪದೋನ್ನತಿ ನೀಡಿ, ಅಂಕೋಲಾ ಪುರಸಭೆಯ ಜವಾಬ್ದಾರಿಯನ್ನೇ ಮುಂದುವರಿಸಿ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.
ಸರ್ಕಾರಿ ಸೇವೆಯಲ್ಲಿ ಸುಮಾರು 31 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಇವರು, ತಮ್ಮ ಈ ಸಾಧನೆಯನ್ನು “ತಂದೆಯ ಕನಸು ನನಸಾದ ಕ್ಷಣ” ಎಂದು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಈ ಹಿಂದೆ ಪ್ರಭಾರಿ ಜವಾಬ್ದಾರಿಯಲ್ಲಿದ್ದ ಅವಧಿಯಲ್ಲಿ ಅಂಕೋಲಾದ ಭೌಗೋಳಿಕ ಪರಿಸ್ಥಿತಿ ಮತ್ತು ಸವಾಲುಗಳನ್ನು ಹತ್ತಿರದಿಂದ ಕಂಡಿರುವ ಇವರಿಗೆ, ಇಲ್ಲಿನ ಜನರ ನಿರೀಕ್ಷೆಗಳ ಬಗ್ಗೆ ಸ್ಪಷ್ಟ ಅರಿವಿದೆ.ಸದ್ಯ ಮಳೆಗಾಲ ಆರಂಭಕ್ಕೆ ಇನ್ನು ಕೇವಲ ಒಂದೂವರೆ ತಿಂಗಳು ಬಾಕಿ ಇರುವುದರಿಂದ, ಪಟ್ಟಣದಲ್ಲಿ ಚರಂಡಿ ಹೂಳೆತ್ತುವ ಕಾರ್ಯ ಹಾಗೂ ಮಳೆಹಾನಿ ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮಗಳಿಗೆ ಅವರು ಆದ್ಯತೆ ನೀಡಬೇಕಿದೆ.
ಪೂರ್ಣ ಅಧಿಕಾರದೊಂದಿಗೆ ಗದ್ದುಗೆ ಏರಿರುವ ಶ್ರೀ ಏಸು ಎಸ್. ಬೆಂಗಳೂರು ಅವರು, ಬಾಕಿ ಉಳಿದಿರುವ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡಿ ಅಂಕೋಲಾವನ್ನು ಮಾದರಿ ಪುರಸಭೆಯನ್ನಾಗಿ ರೂಪಿಸಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.













Leave a Reply