ಮಧ್ಯರಾತ್ರಿ ನಡೆದ ಘಟನೆ: ರಸ್ತೆ ಬದಿಯಲ್ಲಿ ನರಳುತ್ತಿದ್ದ ನರಿಯನ್ನು ರಕ್ಷಿಸಿದ ಫಾರೆಸ್ಟ್ ಗಾರ್ಡ್.​

ಮಧ್ಯರಾತ್ರಿ ನಡೆದ ಘಟನೆ: ರಸ್ತೆ ಬದಿಯಲ್ಲಿ ನರಳುತ್ತಿದ್ದ ನರಿಯನ್ನು ರಕ್ಷಿಸಿದ ಫಾರೆಸ್ಟ್ ಗಾರ್ಡ್.​

ಕಾರವಾರ: ದಿನಾಂಕ 13-03-2026ರ ರಾತ್ರಿ 11:30ರ ಸಮಯ. ನಂದನಗದ್ದಾ ದಿಂದ ಬಂಡಿಸಿಟ್ಟ ಕಡೆಗೆ ಹೋಗುವ ರಸ್ತೆಯ ಪೇಡನೇಕರ್ ವಾಡ್ ಬಳಿ ಅಪಘಾತಕ್ಕೀಡಾದ ವನ್ಯಜೀವಿ ನರಿಯೊಂದು ರಸ್ತೆಯ ಬದಿಯಲ್ಲಿ ಗಾಯಗೊಂಡು ಬಿದ್ದಿತ್ತು. ಆ ರಸ್ತೆಯ ಮೂಲಕ ಸಾಗುತ್ತಿದ್ದ ನವೀನ ಗಾಂವಕರ್ ಅವರು ರಕ್ತದ ಮಡುವಿನಲ್ಲಿ ನರಳುತ್ತಿದ್ದ ಪ್ರಾಣಿಯನ್ನು ಗಮನಿಸಿ, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.​

ಮಾಹಿತಿ ಪಡೆದ ಕಾರವಾರ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಬೀಟ್ ಫಾರೆಸ್ಟರ್ ಗೋಪಾಲ್ ನಾಯ್ಕ್, ಕರ್ತವ್ಯದ ಭಾಗವಾಗಿ ತಡಮಾಡದೆ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದರು.​ಸ್ಥಳಕ್ಕೆ ಬಂದು ನೋಡಿದಾಗ ನರಿಯ ಸ್ಥಿತಿ ಗಂಭೀರವಾಗಿತ್ತು. ಪ್ರಾಣಿ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಚಿಕಿತ್ಸೆ ಅಗತ್ಯವಿತ್ತು. ದೊಡ್ಡ ವಾಹನಕ್ಕಾಗಿ ಕಾಯುವ ಬದಲಿಗೆ, ಮೂಲತಃ ಶಿವಮೊಗ್ಗದವರಾದ ಗೋಪಾಲ್ ನಾಯ್ಕ್ ಅವರು ತಾವೊಬ್ಬರೇ ನರಿಯನ್ನು ಎತ್ತಿಕೊಂಡು ತಮ್ಮ ಬೈಕ್‌ನಲ್ಲಿ ಹತ್ತಿಸಿಕೊಂಡರು.

ಆ ಮಧ್ಯರಾತ್ರಿಯ ಕತ್ತಲಲ್ಲಿ ಒಬ್ಬರೇ ಬೈಕ್ ಚಲಾಯಿಸಿಕೊಂಡು ಹೋಗಿ, ನರಿಗೆ ತಕ್ಷಣದ ಪ್ರಥಮ ಚಿಕಿತ್ಸೆ ದೊರಕುವಂತೆ ಮಾಡಿದರು.​ಯಾವುದೇ ವಿಳಂಬ ಮಾಡದೆ, ಕರ್ತವ್ಯದ ಕರೆಯನ್ನು ಪಾಲಿಸಿದ ಗೋಪಾಲ್ ನಾಯ್ಕ್ ಅವರ ಈ ನಡೆ, ಅಂದು ಆ ವನ್ಯಜೀವಿಯ ಪ್ರಾಣ ಉಳಿಸಲು ಕಾರಣವಾಯಿತು. ಸಾರ್ವಜನಿಕರು ನೀಡಿದ ಮಾಹಿತಿಗೆ ಇಲಾಖೆಯ ಸಿಬ್ಬಂದಿ ತ್ವರಿತವಾಗಿ ಸ್ಪಂದಿಸಿದ ಈ ಘಟನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!