
ಅಂಕೋಲಾ ರಾಜಕೀಯದಲ್ಲಿ ಈಗ ‘ಬ್ಯಾನರ್ ಸಮರ’ ತಾರಕಕ್ಕೇರಿದೆ. ಅಭಿವೃದ್ಧಿಯ ವಿಷಯದಲ್ಲಿ ಶಾಸಕರನ್ನು ಎದುರಿಸಲಾಗದ ಹೇಡಿಗಳು ಈಗ ಕತ್ತಲಲ್ಲಿ ಬ್ಯಾನರ್ ಕಳ್ಳತನ ಮಾಡುವ ಕೀಳುಮಟ್ಟದ ಕೆಲಸಕ್ಕೆ ಇಳಿದಿದ್ದಾರೆ. ಹನುಮಟ್ಟ ವಂದಿಗೆಯ ಮಾಜಿ ಸದಸ್ಯೆ ರೇಖಾ ದಿನಕರ್ ಗಾಂವಕರ್ ಅವರು ಶಾಸಕ ಸತೀಶ್ ಶೈಲ್ ಅವರಿಗೆ ಅಭಿನಂದನೆ ಸಲ್ಲಿಸಲು ಅಳವಡಿಸಿದ್ದ ಬೃಹತ್ ಬ್ಯಾನರ್‌ಗಳು ರಹಸ್ಯವಾಗಿ ಮಾಯವಾಗಿವೆ. ಇದು ಶಾಸಕರ ಜನಪ್ರಿಯತೆ ಕಂಡು ನಡುಗುತ್ತಿರುವ ಪಿತೂರಿಗಾರರ ಕೃತ್ಯವೇ? ನೋಡಿ ನಮ್ಮ ಇಂದಿನ ಈ ವಿಶೇಷ ವರದಿ.””
ಅಂಕೋಲಾ ಪುರಸಭೆಯ 22ನೇ ವಾರ್ಡ್‌ನ ಮಾಜಿ ಸದಸ್ಯೆ ರೇಖಾ ಗಾಂವಕರ್ ಅವರು ತಮ್ಮ ಪುರಸಭೆಯ22ನೇ ವಾರ್ಡ್‌ನ ಅಭಿವೃದ್ಧಿಗಾಗಿ ಶಾಸಕರ ಬೆಂಬಲಕ್ಕೆ ನಿಂತಿದ್ದರು. ಪರಿಣಾಮವಾಗಿ, ಶಾಸಕ ಸತೀಶ್ ಶೈಲ್ ಅವರು ಒಂದು ಕೋಟಿ ರೂಪಾಯಿಗೂ ಅಧಿಕ ಅನುದಾನವನ್ನು ಬಿಡುಗಡೆ ಮಾಡಿ ವಾರ್ಡ್‌ನ ಅಭಿವೃದ್ಧಿಗೆ ವೇಗ ನೀಡಿದ್ದರು. ಈ ಅಭಿವೃದ್ಧಿ ಕೆಲಸಗಳಿಗೆ ಕೃತಜ್ಞತೆ ಸಲ್ಲಿಸಲು ಶಾಸಕರ ಬೃಹತ್ ಭಾವಚಿತ್ರವುಳ್ಳ ಬ್ಯಾನರ್‌ಗಳನ್ನು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಅಳವಡಿಸಲಾಗಿತ್ತು.
ಆದರೆ, ನಿನ್ನೆ ದಿನಾಂಕ 22/02/2026ರಂದು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುವ ಹೊತ್ತಲ್ಲೇ ಈ ಬ್ಯಾನರ್‌ಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. ಶಾಸಕರ ಅಭಿವೃದ್ಧಿ ಕೆಲಸವನ್ನು ಸಹಿಸದ ವ್ಯಕ್ತಿ , ಶಾಸಕರ ಭಾವಚಿತ್ರ ರಸ್ತೆಯಲ್ಲಿ ರಾರಾಜಿಸುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಎಂಬ ಅನುಮಾನ ವ್ಯಕ್ತವಾಗಿದೆ.”

*(ರೇಖಾ ಗಾಂವಕರ್ ಅವರ ಪ್ರತಿಕ್ರಿಯೆ):”ಈ ಕುರಿತು ತೀವ್ರ ಆಕ್ರೋಶ ಹೊರಹಾಕಿದ ಮಾಜಿ ಸದಸ್ಯೆ ರೇಖಾ ಅವರು, ‘ಬ್ಯಾನರ್ ಕದ್ದರೆ ನೀವು ನಾಯಕರಾಗಲು ಸಾಧ್ಯವಿಲ್ಲ. ಶಾಸಕರ ಮೇಲಿನ ಅಸೂಯೆಯಿಂದ ಈ ರೀತಿ ರಾತ್ರೋರಾತ್ರಿ ಬ್ಯಾನರ್ ಕಳ್ಳತನ ಮಾಡಿರುವುದು ನಿಮ್ಮ ಹೇಡಿತನವನ್ನು ತೋರಿಸುತ್ತದೆ. ಇಂತಹ ಪಿತೂರಿಗಾರರಿಗೆ ಮತ್ತು ಅಭಿವೃದ್ಧಿ ವಿರೋಧಿಗಳಿಗೆ ಅಂಕೋಲಾದ ಪ್ರಜ್ಞಾವಂತ ಜನತೆಯೇ ಛೀಮಾರಿ ಹಾಕಲಿದ್ದಾರೆ’ ಎಂದು ನೇರವಾಗಿಯೇ ಸವಾಲು ಹಾಕಿದ್ದಾರೆ
ರಾಜಕೀಯ ಮಾಡುವುದಕ್ಕೆ ನೂರಾರು ಹಾದಿಗಳಿವೆ, ಆದರೆ ಸಮಾಜಕ್ಕೆ ಮಾದರಿಯಾಗುವ ರಾಜಕಾರಣ ಅದು ಅಭಿವೃದ್ಧಿಯ ಹಾದಿಯಲ್ಲಿರಬೇಕು. ಕೇವಲ ಬ್ಯಾನರ್‌ಗಳನ್ನು ಕಿತ್ತು ಹಾಕುವುದರಿಂದ ಅಥವಾ ಪ್ರಚಾರವನ್ನು ತಡೆಯುವುದರಿಂದ ಯಾರೂ ನಾಯಕರಾಗಲು ಸಾಧ್ಯವಿಲ್ಲ. ನಿಜವಾದ ರಾಜಕೀಯ ಅಡಗಿರುವುದು ಜನರ ಕಷ್ಟಕ್ಕೆ ಸ್ಪಂದಿಸುವಲ್ಲಿ ಮತ್ತು ಕ್ಷೇತ್ರದ ಪ್ರಗತಿಯಲ್ಲಿ. ಇನ್ನಾದರೂ ಇಂತಹ ಪಿತೂರಿಗಾರರು ಬ್ಯಾನರ್ ರಾಜಕೀಯ ಬಿಟ್ಟು, ಅಭಿವೃದ್ಧಿ ಎಂದರೆ ಏನು ಎಂಬುದನ್ನು ಅರಿತುಕೊಳ್ಳಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

Leave a Reply