ಅಂಕೋಲಾ: ತಾಲೂಕಿನ ಕೋಗ್ರೆಯ ಶ್ರೀ ಗ್ರಾಮ ದೇವಿ ಟ್ರಸ್ಟ್ ವತಿಯಿಂದ ಶ್ರೀ ಕೋಗ್ರೆ ಬೊಮ್ಮಯ್ಯ ದೇವ ಮತ್ತು ಶ್ರೀ ರಾಕೇಶ್ವರ ಭಂಡಾರ ದೇವರುಗಳ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ಅನ್ನಸಂತರ್ಪಣೆಯು ಏಪ್ರಿಲ್ 25, ಶನಿವಾರದಂದು ಜರುಗಲಿದೆ.
ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದ್ದು, ಮಧ್ಯಾಹ್ನ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿ ಮಂಜುನಾಥ ಶಂಕರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













Leave a Reply