ಅಂಕೋಲಾ ತಾಲೂಕು ಮಟ್ಟದ ಕ್ರೀಡಾಕೂಟ: ಆರ್.ಪಿ.ಎಸ್. ಸೆಕೆಂಡರಿ ಸ್ಕೂಲ್ ಬೆಳಸೆ ವಿದ್ಯಾರ್ಥಿಗಳ ಕ್ರೀಡಾ ಸಾಧನೆ: ಜಿಲ್ಲಾ ಮಟ್ಟಕ್ಕೆ ಆಯ್ಕೆ!

ಅಂಕೋಲಾ :ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಂಕೋಲಾ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆರ್.ಪಿ.ಎಸ್. ಸೆಕೆಂಡರಿ ಸ್ಕೂಲ್ ಬೆಳಸೆ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ.

17 ವರ್ಷ ವಯೋಮಾನದ ಪ್ರೌಢಶಾಲಾ ವಿಭಾಗದಲ್ಲಿ ಅತ್ಯುತ್ತಮ ವೈಯಕ್ತಿಕ ಪ್ರದರ್ಶನ ನೀಡಿದ ಚೇತನಾ ಈಶ್ವರ ಗೌಡ 100 ಮೀ. ಮತ್ತು 200 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.
ಉಳಿದಂತೆ ಬಾಲಕರ ವಿಭಾಗದಲ್ಲಿ ಕಾರ್ತಿಕ ಹರೀಶ ಗೌಡ (ಚೆಸ್ – ಪ್ರಥಮ), ಅಶ್ವಥ ದಯಾ ಗೌಡ (5 ಕಿ.ಮೀ. ನಡಿಗೆ – ಪ್ರಥಮ), ರೋಹಿತ ಯಶವಂತ ಗೌಡ (1500 ಮೀ. ಓಟ – ಪ್ರಥಮ), ನರೇಶ ಯೇಸು ಗೌಡ (1500 ಮೀ. ಓಟ – ದ್ವಿತೀಯ), ವಿಘ್ನೇಶ್ವರ ಪುಟ್ಟು ಗೌಡ (400 ಮೀ. ಓಟ – ತೃತೀಯ) ಹಾಗೂ ಗಗನ ರಾಘವೇಂದ್ರ ನಾಯ್ಕ (5 ಕಿ.ಮೀ. ನಡಿಗೆ – ತೃತೀಯ) ಸ್ಥಾನ ಪಡೆದಿದ್ದಾರೆ. ಜೊತೆಗೆ ಬಾಲಕರ ಬಾಲ್ ಬ್ಯಾಡ್ಮಿಂಟನ್ ಹಾಗೂ ಥ್ರೋಬಾಲ್ ತಂಡಗಳು ದ್ವಿತೀಯ ಸ್ಥಾನ ಗಳಿಸಿವೆ.


ಬಾಲಕಿಯರ ವಿಭಾಗದಲ್ಲಿ ಸುಜಾತಾ ಈಶ್ವರ ಗೌಡ (400 ಮೀ. ಓಟ – ಪ್ರಥಮ, 800 ಮೀ. ಓಟ – ದ್ವಿತೀಯ), ಅಂಕಿತಾ ಅಮಾಸ್ಯೆ ಗೌಡ (ಎತ್ತರ ಜಿಗಿತ – ಪ್ರಥಮ), ಶ್ವೇತಾ ಶಿವು ಗೌಡ (3000 ಮೀ. ಓಟ – ಪ್ರಥಮ), ಚೈತ್ರಾ ಮಾದೇವ ಗೌಡ (3 ಕಿ.ಮೀ. ನಡಿಗೆ – ಪ್ರಥಮ), ದರ್ಶಿನಿ ಸುರೇಶ ಗೌಡ (1500 ಮೀ. ಓಟ – ಪ್ರಥಮ), ಭೂಮಿಕಾ ಮಂಗು ಗೌಡ (3 ಕಿ.ಮೀ. ನಡಿಗೆ – ದ್ವಿತೀಯ) ಮತ್ತು ಸಂಜೀವಿನಿ ಸುಕ್ರು ಗೌಡ (1500 ಮೀ. ಓಟ – ತೃತೀಯ) ಸಾಧನೆ ಮಾಡಿದ್ದು, ಬಾಲಕಿಯರ 4×400 ಮೀ. ರಿಲೇ ತಂಡವು ಪ್ರಥಮ ಸ್ಥಾನ ಪಡೆದು ಮಿಂಚಿದೆ

.
14 ವರ್ಷ ವಯೋಮಾನದ ಪ್ರಾಥಮಿಕ ಶಾಲಾ ವಿಭಾಗದಲ್ಲಿ ರೋಹಿತ ಪಾಂಡು ಗೌಡ (600 ಮೀ. ಓಟ – ಪ್ರಥಮ, ಎತ್ತರ ಜಿಗಿತ – ತೃತೀಯ), ರಾಘವೇಂದ್ರ ನಾಗರಾಜ ಗೌಡ (100 ಮೀ. ಓಟ – ತೃತೀಯ), ಸಿಂಚನಾ ನಾರಾಯಣ ಗೌಡ (ಗುಂಡು ಎಸೆತ – ತೃತೀಯ) ಹಾಗೂ ಬಾಲಕರ 4×100 ಮೀ. ರಿಲೇ ತಂಡವು ದ್ವಿತೀಯ ಸ್ಥಾನ ಸಾಧಿಸಿದೆ.


ಅದ್ಭುತ ಸಾಧನೆ ತೋರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ಅವರಿಗೆ ಕಠಿಣ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಸುಧೀರ ರಾವ್ ಕೆ. ಅವರಿಗೆ ಶಾಲಾ ಆಡಳಿತ ಮಂಡಳಿಯ ಸರ್ವಸದಸ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ಊರಿನ ಸಮಸ್ತ ನಾಗರಿಕರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!