ಕಾರವಾರ :ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯು ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಣೆ, ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಅಪರಾಧ ಪತ್ತೆ ಹಚ್ಚುವಿಕೆಯಲ್ಲಿ ಅತ್ಯುತ್ತಮ ದಕ್ಷತೆ ತೋರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸುವ “ಕಾಪ್ ಆಫ್ ದಿ ಮಂತ್” (Cop of the Month) ಗೌರವವನ್ನು ಪ್ರಕಟಿಸುತ್ತಾ ಬಂದಿದೆ. ಪ್ರತಿ ತಿಂಗಳು ಆಯಾ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಈ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿರುವುದು, ಇಲಾಖೆಯ ಇತರ ಪೊಲೀಸರಿಗೂ ಇನ್ನಷ್ಟು ಜವಾಬ್ದಾರಿಯಿಂದ ಕೆಲಸ ಮಾಡಲು ಮತ್ತು ಉತ್ತಮ ಸಾಧನೆ ತೋರಲು ಹೊಸ ಉತ್ಸಾಹ ಹಾಗೂ ಪ್ರೇರಣೆ ನೀಡುವಂತಾಗಿದೆ.

ಆಗಸ್ಟ್-2026ರ ತಿಂಗಳ ಗೌರವಕ್ಕೆ ಅಂಕೋಲಾ ಪೊಲೀಸ್ ಠಾಣೆಯ ಇಬ್ಬರು ದಕ್ಷ ಸಿಬ್ಬಂದಿಗಳು ಭಾಜನರಾಗಿದ್ದಾರೆ. ಠಾಣೆಯ ಶ್ರೀ ಗಿರೀಶ್ ಲಮಾಣಿ (ಕೆ.ಪಿ.ಎಸ್ 559) ಹಾಗೂ ಶ್ರೀ ಭಗವಾನ್ ಗಾಂವಕರ (ಕೆ.ಪಿ.ಎಸ್ 564) ಅವರು ಆರೋಪಿಗಳ ಪತ್ತೆ ಕರ್ತವ್ಯದಲ್ಲಿ ಅತ್ಯಂತ ಚಾಣಾಕ್ಷತನ, ಸಮಯಪ್ರಜ್ಞೆ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಿ ಈ ಸಾಧನೆ ಮಾಡಿದ್ದಾರೆ.ಸವಾಲಿನ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಇವರು ತೋರಿದ ದಕ್ಷತೆಯನ್ನು ಪರಿಗಣಿಸಿ ಜಿಲ್ಲಾ ಪೊಲೀಸ್ ಇಲಾಖೆಯು ಇವರನ್ನು ‘ಕಾಪ್ ಆಫ್ ದಿ ಮಂತ್’ ಗೌರವಕ್ಕೆ ಆಯ್ಕೆ ಮಾಡಿದೆ. ಪೊಲೀಸ್ ಸಿಬ್ಬಂದಿಯ ಈ ಶ್ರಮವನ್ನು ಗುರುತಿಸಿ ಗೌರವಿಸುತ್ತಿರುವ ಇಲಾಖೆಯ ಜನಸ್ನೇಹಿ ಹಾಗೂ ಪ್ರೋತ್ಸಾಹದಾಯಕ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.












Leave a Reply