ಅಂಕೋಲಾ: ಮನೆಯಿಂದ ಹೊರಹೋದ ವಯೋವೃದ್ಧೆ ನಾಪತ್ತೆ​.

ಅಂಕೋಲಾ ತಾಲೂಕಿನ ಹಾರವಾಡದ ತರಂಗಮೇಟ ನಿವಾಸಿಯಾದ 70 ವರ್ಷದ ಸಾವಿತ್ರಿ ಸುಕ್ರು ಹರಿಕಂತ್ರ ಎಂಬ ವಯೋವೃದ್ಧೆ ನಾಪತ್ತೆಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಇವರು, ದಿನಾಂಕ 03-05-2026ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಮನೆಯಿಂದ ಹೊರಹೋದವರು ಈವರೆಗೆ ವಾಪಸ್ ಬಂದಿಲ್ಲ. ಈ ಕುರಿತು ಇವರ ಪುತ್ರಿ ಶ್ವೇತಾ ಆನಂದ ಹರಿಕಂತ್ರ ಅವರು ನೀಡಿದ ದೂರಿನನ್ವಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಪತ್ತೆಯಾದ ಮಹಿಳೆಗಾಗಿ ಹುಡುಕಾಟ ಆರಂಭಿಸಿದ್ದಾರೆ.​

ನಾಪತ್ತೆಯಾದ ಮಹಿಳೆಯು ಸುಮಾರು 4.5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು ಹಾಗೂ ಕಪ್ಪು ಮೈಬಣ್ಣ ಹೊಂದಿದ್ದಾರೆ. ಕಪ್ಪು-ಬಿಳಿ ಮಿಶ್ರಿತ ಕೂದಲಿನ ಇವರು ನಾಪತ್ತೆಯಾದ ಸಮಯದಲ್ಲಿ ಕೆಂಪು, ಹಳದಿ ಮತ್ತು ನೀಲಿ ಬಣ್ಣದ ಸೀರೆ ಹಾಗೂ ಕಡು ನೀಲಿ ಬಣ್ಣದ ಬ್ಲೌಸ್ ಧರಿಸಿದ್ದರು. ವಿಶೇಷವಾಗಿ ಇವರ ಎಡಗಣ್ಣಿಗೆ ಶಸ್ತ್ರಚಿಕಿತ್ಸೆಯಾಗಿರುತ್ತದೆ. ಇವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ಸಾರ್ವಜನಿಕರು ತಕ್ಷಣವೇ ಅಂಕೋಲಾ ಪೊಲೀಸ್ ಠಾಣೆಯ ದೂ ಸಂಖ್ಯೆ: (08388) 220333 ಅಥವಾ ಮೊಬೈಲ್ ಸಂಖ್ಯೆ: 9480805250/ 9480805268 ಗೆ ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!