ಏಪ್ರಿಲ್ 25ರಂದು ಶ್ರೀ ಕೋಗ್ರೆ ಬೊಮ್ಮಯ್ಯ ದೇವ ಹಾಗೂ ರಾಕೇಶ್ವರ ಭಂಡಾರ ದೇವರ ವರ್ಧಂತಿ ಉತ್ಸವ.​

ಅಂಕೋಲಾ: ತಾಲೂಕಿನ ಕೋಗ್ರೆಯ ಶ್ರೀ ಗ್ರಾಮ ದೇವಿ ಟ್ರಸ್ಟ್ ವತಿಯಿಂದ ಶ್ರೀ ಕೋಗ್ರೆ ಬೊಮ್ಮಯ್ಯ ದೇವ ಮತ್ತು ಶ್ರೀ ರಾಕೇಶ್ವರ ಭಂಡಾರ ದೇವರುಗಳ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ಅನ್ನಸಂತರ್ಪಣೆಯು ಏಪ್ರಿಲ್ 25, ಶನಿವಾರದಂದು ಜರುಗಲಿದೆ.

​ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದ್ದು, ಮಧ್ಯಾಹ್ನ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿ ಮಂಜುನಾಥ ಶಂಕರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!