ಅಂಕೋಲಾ: ತಾಲೂಕಿನ ಲೋಕೋಪಯೋಗಿ ಗುತ್ತಿಗೆದಾರರ ಸಂಘ (ರಿ.) ಇವರ ವತಿಯಿಂದ “ಅನಂತ ಚತುರ್ದಶಿ” (ಲೋಪಿ) ಪ್ರಯುಕ್ತ ದಿನಾಂಕ 25-09-2026, ಶುಕ್ರವಾರದಂದು ಮಧ್ಯಾಹ್ನ 12:30 ಗಂಟೆಯಿಂದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶ್ರೀ ವೆಂಕಟರಮಣ ದೇವ ಹಾಗೂ ಸಮಸ್ತ ದೇವತಾ ಮೂರ್ತಿಗಳ ಕೃಪಾಶೀರ್ವಾದದೊಂದಿಗೆ ನೆರವೇರುತ್ತಿರುವ ಈ ಪುಣ್ಯ ಕಾರ್ಯದಲ್ಲಿ ತಾಲೂಕಿನ ಹಾಗೂ ಸುತ್ತಮುತ್ತಲಿನ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಆದರಪೂರ್ವಕವಾಗಿ ವಿನಂತಿಸಿಕೊಂಡಿದ್ದಾರೆ.













Leave a Reply