ಶಾಂತಿನಿಕೇತನ ಶಾಲೆಯಲ್ಲಿ ಅರ್ಥ ಪೂರ್ಣವಾದ ಮಾತೃ ವಂದನಾ ಕಾರ್ಯಕ್ರಮ.

ಅಂಕೋಲಾ : ಇಲ್ಲಿನ ಶಾಂತಿನಿಕೇತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗುರುಪೂರ್ಣಿಮೆಯ ಅಂಗವಾಗಿ ‘ಮಾತೃವಂದನಾ’ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ವೈಭವದಿಂದ ಹಮ್ಮಿಕೊಳ್ಳಲಾಗಿತ್ತು.ಪಾಲಕರಾದ ಶ್ರೀಮತಿ. ಸರೋಜಾ ನಾಯಕ, ಪಿ ಡಿ. ಒ ,ಕಾರ್ಯಕ್ರಮದ ಕುರಿತು ಮಾತನಾಡಿ”ಮಗುವಿನ ಜೀವನದಲ್ಲಿ ಮೊದಲ ಗುರು ತಾಯಿ. ಮಾತೃದೇವೋ ಭವ ಎಂಬಂತೆ, ಪ್ರತಿಯೊಬ್ಬ ಮಗುವೂ ಸಂಸ್ಕಾರ ಹಾಗೂ ಸನ್ಮಾರ್ಗವನ್ನು ಮನೆಯಲ್ಲಿ ತಾಯಂದಿರಿಂದಲೇ ಕಲಿಯುತ್ತದೆ. ಅಂತಹ ತಾಯಂದಿರಿಗೆ ಗೌರವ ಸಮರ್ಪಿಸುವ ‘ಮಾತೃವಂದನಾ’ ಕಾರ್ಯಕ್ರಮವನ್ನು ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ಆಯೋಜಿಸಿರುವುದು ಅತ್ಯಂತ ಅರ್ಥಪೂರ್ಣವಾಗಿದೆ” ಎಂದು ಅಭಿಪ್ರಾಯಪಟ್ಟರು.

ಇನ್ನೋರ್ವ ಪಾಲಕರಾದ ಪಿ.ಡಿ. ಒ. ಶ್ರೀಮತಿ. ಹಸ್ಮತ ಅವರು ಮಾತನಾಡಿ “ಮಕ್ಕಳಲ್ಲಿ ಸಣ್ಣ ವಯಸ್ಸಿನಿಂದಲೇ ಗುರು-ಹಿರಿಯರಲ್ಲಿ ಗೌರವ ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಬೆಳೆಸುವುದು . ಗುರುಪೂರ್ಣಿಮೆ ಹಾಗೂ ಮಾತೃವಂದನಾ ಕಾರ್ಯಕ್ರಮವು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಗಟ್ಟಿಗೊಳಿಸಲು ಸಹಕಾರಿಯಾಗಿದೆ” ಎಂದರು.

ಇದೇ ಶುಭ ಸಂದರ್ಭದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ‘ ಶ್ಲೋಕ ಹೇಳುವ ಸ್ಪರ್ಧೆ’ಯ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು. ಶಿಕ್ಷಕಿಯರಾದ ಮಮತಾ ನಾಯ್ಕ್, ಶ್ರದ್ಧಾ ಆಚಾರ್ಯ, ಮೈತ್ರಿ ಭಟ್ ಲಕ್ಷ್ಮಿ ಹಾಗೂ ಸೌಖ್ಯ ಅವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

Leave a Reply

Your email address will not be published. Required fields are marked *

error: Content is protected !!