ಹಳ್ಳಿ ಶಾಲೆ ಅಭಿವೃದ್ಧಿ ರೋಟರಿ ಗುರಿ : ಪುಷ್ಪಲತಾ ನಾಯಕ.

ಹಳ್ಳಿ ಶಾಲೆ ಅಭಿವೃದ್ಧಿ ರೋಟರಿ ಗುರಿ : ಪುಷ್ಪಲತಾ ನಾಯಕ.

ಅಂಕೋಲಾ : ರೋಟರಿ ಕ್ಲಬ್ ಅಂಕೋಲಾ ರೂರಲ್ ವತಿಯಿಂದ ಶೆಟಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಟ್ಟಿ ಮತ್ತು ಪೆನ್ ಹಾಗೂ ಕಲಿಕಾ ಸಾಮಗ್ರಿ ವಿತರಣೆಯನ್ನು ರೋಟರಿ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ ನಾಯಕ ಮಾಡಿದರು.

ಅವರು ಮಾತನಾಡುತ್ತಾ ಹಳ್ಳಿಯ ಶಾಲೆಗಳ ಅಭಿವೃದ್ಧಿ ಗೆ ರೋಟರಿ ಸಂಸ್ಥೆ ಶ್ರಮಿಸುತ್ತಿದೆ. ತಾವು ತಮ್ಮ ಕೈಲಾದಷ್ಟು ಸಹಾಯವನ್ನು ಸರಕಾರಿ ಶಾಲಾ ಮಕ್ಕಳಿಗೆ ಮಾಡುತ್ತಿದ್ದೇನೆ ಎಂದರು.

ಇನ್ನೋರ್ವ ರೋಟರಿ ಸದಸ್ಯರಾದ ಡಾ.ಸಂಜು ನಾಯಕ ಮಾತನಾಡಿ ಶಾಲೆಗಳಿಗೆ ಸೂಕ್ತ ಸೌಲಭ್ಯ ಒದಗಿಸಿದರೆ ಹಳ್ಳಿ ಮಕ್ಕಳು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆಯುವುದರಲ್ಲಿ ಸಂಶಯವಿಲ್ಲ ಎಂದರು. ಮುಖ್ಯೋದ್ಯಾಪಕಿ ಶ್ರೀಮತಿ ಪದ್ಮಾವತಿ ಸರ್ವರನ್ನು ಸ್ವಾಗತಿಸಿ ಧನ್ಯವಾದ ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಮಂಗಲಾ, ದೀಪಾ ಮತ್ತು ಮಣಿಕಂಠ ಉಪಸ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!