ಜಾವಲಿನ್ ಎಸೆತದಲ್ಲಿ ಸಾಧನೆ: ಮಂಜಗುಣಿ ಶ್ರೀ ಗುರುದಾಸ ಪ್ರೌಢಶಾಲೆಯ ಸೃಜನ ನಾಯ್ಕ ರಾಜ್ಯ ಮಟ್ಟಕ್ಕೆ ಆಯ್ಕೆ.

ಅಂಕೋಲಾ: ತಾಲೂಕಿನ ಮಂಜಗುಣಿಯ ಶ್ರೀ ಗುರುದಾಸ ಪ್ರೌಢಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಕುಮಾರ ಸೃಜನ ಸಂತೋಷ ನಾಯ್ಕ ಜಾವಲಿನ್ ಎಸೆತ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.

2026-27 ನೇ ಸಾಲಿನ ಭಟ್ಕಳದ ಸರ್ಕಾರಿ ಪ್ರೌಢಶಾಲೆ ಬೆಳಕೆ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಸೃಜನ ಅತ್ಯುತ್ತಮ ಪ್ರದರ್ಶನ ನೀಡಿ ಈ ಸಾಧನೆ ಮಾಡಿದ್ದಾನೆ.ವಿದ್ಯಾರ್ಥಿಯ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, SDMC ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪಾಲಕ/ಪೋಷಕ ಸಮಿತಿ, ತಾಯಂದಿರ ಸಮಿತಿ, ಬೆಳ್ಳಿ ಹಬ್ಬದ ಸಮಿತಿ ಹಾಗೂ ಬೆಳ್ಳಿ ಹಬ್ಬ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಅಲ್ಲದೆ, ಮುಖ್ಯಾಧ್ಯಾಪಕರು, ನಿವೃತ್ತ ಮುಖ್ಯಾಧ್ಯಾಪಕರಾದ ಶ್ರೀ ಮಂಜುನಾಥ ಡಿ. ನಾಯ್ಕ, ಶಾಲೆಯ ಶಿಕ್ಷಕರಾದ ಶ್ರೀ ಭಾಸ್ಕರ ಡಿ. ನಾಯ್ಕ, ಶ್ರೀ ಸಚಿನ ಎನ್. ನಾಯಕ, ಶ್ರೀಮತಿ ದೀಪಾ ಜಿ. ನಾಯಕ, ಶ್ರೀ ಚಂದ್ರಕಾಂತ ಡಿ. ಲಮಾಣಿ, ಶ್ರೀ ಅರುಣಕುಮಾರ ಆರ್. ನಾಯ್ಕ, ಕುಮಾರಿ ನಯನಾ ಎಸ್. ಗಾಂವಕರ, ಕಛೇರಿ ಸಹಾಯಕರಾದ ರಾಜೇಶ ವಿ. ಬಾನಾವಳಿಕರ ಹಾಗೂ ಸುತ್ತಮುತ್ತಲಿನ ಊರ ನಾಗರಿಕರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!