ಬೇಲೆಕೇರಿ ಶ್ರೀ ಕಾತ್ಯಾಯನಿ ಪರ್ಸಿನ್ ಬೋಟ್ ಪ್ರಗತಿಪರ ಸಂಘದ ಅಧ್ಯಕ್ಷರಾಗಿ ನಿತ್ಯಾನಂದ ಬಾನವಳಿಕರ್, ಉಪಾಧ್ಯಕ್ಷರಾಗಿ ಪುಂಡ್ಲಿಕ ಬಾನಾವಳಿಕರ್ ಅವಿರೋಧ ಆಯ್ಕೆ.

ಅಂಕೋಲಾ: ತಾಲೂಕಿನ ಬೇಲೆಕೇರಿಯ ಶ್ರೀ ಕಾತ್ಯಾಯನಿ ಪ್ರಗತಿಪರ ಪರ್ಸಿನ್ ಬೋಟ್ ಸಂಘದ ವತಿಯಿಂದ ರವಿವಾರ ದಿನಾಂಕ:9/08/2026ರಂದು ಶ್ರೀ ಗಣೇಶನ ಹೋಮ-ಹವನ ಹಾಗೂ ಕಡಲಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಯಿತು.

ಇದೇ ಸಂದರ್ಭದಲ್ಲಿ ಸಂಘದ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿತು.​ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ನಿತ್ಯಾನಂದ ಗಣಪತಿ ಬಾನಾವಳಿಕರ ಹಾಗೂ ಉಪಾಧ್ಯಕ್ಷರಾಗಿ ಪರ್ಸಿನ್ ಬೋಟ್ ಕಾರ್ಮಿಕರಾದ ಶ್ರೀ ಪುಂಡ್ಲಿಕ್ ಹಾಲು ಬಾನಾವಳಿಕರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.​ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಅಂಕೋಲಾ-ಕಾರವಾರ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಸತೀಶ್ ಸೈಲ್ ಅವರು ನಮ್ಮ ಬಂದರಿಗೆ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿಕೊಡುವ ಮೂಲಕ ಮೀನುಗಾರರ ಅಭಿವೃದ್ಧಿಗೆ ನೆರವಾಗಿದ್ದಾರೆ. ಮುಂಬರುವ ದಿನಗಳಲ್ಲೂ ಬಂದರಿಗೆ ಅಗತ್ಯವಿರುವ ಉಳಿದ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿಕೊಡಲಿದ್ದಾರೆ ಎಂಬ ಭರವಸೆ ನಮಗಿದೆ. ಶಾಸಕರಿಗೆ ಶ್ರೀ ಕಾತ್ಯಾಯನಿ ದೇವಿ ಹಾಗೂ ಸಮುದ್ರರಾಜನು ಆಯುಷ್ಯ, ಆರೋಗ್ಯ, ಸುಖ-ಸಂಪತ್ತು ಮತ್ತು ಇನ್ನಷ್ಟು ಉನ್ನತ ಹುದ್ದೆಗಳನ್ನು ಕರುಣಿಸಲಿ ಎಂದು ದೇವರಿಗೂ ಹಾಗೂ ಸಮುದ್ರದೇವತೆಗೆ ಪ್ರಾರ್ಥಿಸಿ ಬಾಗಿನ ಅರ್ಪಿಸಲಾಯಿತು.ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರು ಹಾಗೂ ಮೀನುಗಾರರ ಪ್ರಮುಖ ಮುಖಂಡರಾದ ಗಣಪತಿ ಮಾದೇವ ಬಾನಾವಳಿಕರ, ಧ್ರುವ ಬಾನಾವಳಿಕರ, ಗಿರಿ ಬಾನಾವಳಿಕರ, ಸೂರಜ್ ಬಾನಾವಳಿಕರ ಸೇರಿದಂತೆ ಹಲವು ಗಣ್ಯರು ಹಾಗೂ ಬೋಟ್ ಕಾರ್ಮಿಕರು ಉಪಸ್ಥಿತರಿದ್ದರು.

✍️ಕ್ರಾಂತಿಕಾರಿ ನ್ಯೂಸ್. ಅಂಕೋಲಾ

Leave a Reply

Your email address will not be published. Required fields are marked *

error: Content is protected !!