ಕಂಡವರ ಹಣಕ್ಕೆ ಆಸೆಪಡದ ರಿಕ್ಷಾ ಚಾಲಕ: ರಸ್ತೆ ಮೇಲೆ ಸಿಕ್ಕ ಪರ್ಸ್ ಮಾಲೀಕರಿಗೆ ಒಪ್ಪಿಸಿದ ಪೂಜಗೇರಿಯ ರಾಜು ಗಾಂವಕರ.

ಅಂಕೋಲ: ತಾಲೂಕಿನ ಜೈ ಹಿಂದ್ ಹೈಸ್ಕೂಲ್ ಎದುರಿನ ಜನದಟ್ಟಣೆ ಇರುವ ರಸ್ತೆಯ ಮೇಲೆ ಅನಾಥವಾಗಿ ಬಿದ್ದಿದ್ದ ಪರ್ಸ್‌ ಒಂದು ಆಟೋ ಚಾಲಕರೊಬ್ಬರ ಕೈಗೆ ಸಿಕ್ಕಿದ್ದು , ಅದನ್ನು ಸಕಾಲದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಪರ್ಸನ ಮಾಲೀಕರಿಗೆ ಮುಟ್ಟಿಸುವುದರೊಂದಿಗೆ ತಮ್ಮ ಪ್ರಾಮಾಣಿಕತೆ ಮೆರೆದಿದ್ದಾರೆ.

ಪೂಜಗೇರಿಯ ನಿವಾಸಿಯಾದ. ಶ್ರೀ ಮಹಾಗಣಪತಿ ರಿಕ್ಷಾ ಸ್ಟ್ಯಾಂಡ್‌ನ ಆಟೋ ಚಾಲಕರಾದ ರಾಜು ಯಶ್ವಂತ ಗಾಂವಕರ್ ಅವರಿಗೆ ಈ ಪರ್ಸ್ ಸಿಕ್ಕಿದ್ದು, ಅದರಲ್ಲಿ ಸಾವಿರಾರು ರೂಪಾಯಿ ನಗದು ಹಣವಿತ್ತು. ಕಂಡವರ ಹಣಕ್ಕೆ ಎಳ್ಳಷ್ಟೂ ಆಸೆ ಪಡದ ಅವರು ತಕ್ಷಣವೇ ಅಂಕೋಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪರ್ಸ್‌ನ ವಾರಸುದಾರರನ್ನು ಪತ್ತೆ ಹಚ್ಚಿ ಅವರಿಗೆ ಸುರಕ್ಷಿತವಾಗಿ ತಲುಪಿಸುವ ಕಾರ್ಯ ಮಾಡಿದ್ದಾರೆ. ಇಂದಿನ ಧಾವಂತದ ಯುಗದಲ್ಲಿ ಹತ್ತು ರೂಪಾಯಿ ಸಿಕ್ಕರೂ ಕಿಸೆಗೆ ಹಾಕಿಕೊಂಡು ತೆರಳುವ ಜನರ ನಡುವೆ, ರಾಜು ಗಾಂವಕರ ಅವರ ಈ ನಿಸ್ವಾರ್ಥ ನಡೆ ಮತ್ತು ಪ್ರಾಮಾಣಿಕತೆ ಸಾರ್ವಜನಿಕರ ಅಪಾರ ಮೆಚ್ಚುಗೆ ಹಾಗೂ ಗೌರವಕ್ಕೆ ಪಾತ್ರವಾಗಿದೆ

Leave a Reply

Your email address will not be published. Required fields are marked *

error: Content is protected !!