ವೈರಲ್ ಆಯ್ತು ವಿಜಯ್ ದೇವರಕೊಂಡ-ರಶ್ಮಿಕಾ ವೆಡ್ಡಿಂಗ್ ಕಾರ್ಡ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಸುದ್ದಿ ಅಧಿಕೃತವಾಗಿದೆ! ಅವರ ವಿವಾಹ ಆಮಂತ್ರಣ ಪತ್ರ ವೈರಲ್ ಆಗಿದ್ದು, ಫೆಬ್ರವರಿ 26 ರಂದು ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ. ಹೈದರಾಬಾದ್‌ನಲ್ಲಿ ಮಾರ್ಚ್ 4 ರಂದು ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಬಹಳ ಸಮಯದಿಂದ ಪ್ರೀತಿಸುತ್ತಿದ್ದ ಈ ಜೋಡಿಯ ಮದುವೆ ಬಗ್ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಆಗುತ್ತಿರುವುದು ಅಧಿಕೃತವಾಗಿದೆ. ಅತಿಥಿಗಳಿಗೆ ನೀಡಲಾದ ಅವರ ವಿವಾಹ ಕಾರ್ಡ್ ವೈರಲ್ ಆಗಿದೆ. ಅವರ ವಿವಾಹ ಫೆಬ್ರವರಿ 26ರಂದು ಅದ್ಧೂರಿಯಾಗಿ ನಡೆಯಲಿದೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದವರ ಜೊತೆ ವಿಜಯ್ ದೇವೆಕೊಂಡ ಮತ್ತು ರಶ್ಮಿಕಾ ವಿವಾಹವಾಗಲಿದ್ದಾರೆ . ಈ ವಿಷಯ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ವಿಜಯ್ ದೇವೆಕೊಂಡ ಮತ್ತು ರಶ್ಮಿಕಾ ಮದುವೆಗೆ ಅತಿಥಿಗಳನ್ನು ಆಹ್ವಾನಿಸುತ್ತಿದ್ದಾರೆ. ಈ ರೀತಿ ಆಹ್ವಾನ ನೀಡಿದವರ ಪೈಕಿ ಒಬ್ಬರು ಮದುವೆ ಆಮಂತ್ರಣ ಪತ್ರವನ್ನು ವೈರಲ್ ಮಾಡಿದ್ದಾರೆ. ವಿವಾಹ ಆಮಂತ್ರಣ ಬಾಕ್ಸ್ ಅಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಎಂದು ಬರೆದಿದೆ. ಆಮಂತ್ರಣ ಪತ್ರದಲ್ಲಿ ಮದುವೆ ಫೆಬ್ರವರಿ 26ರಂದು ನಡೆಯಲಿದೆ ಎಂದು ಬರೆಯಲಾಗಿದೆ.

ಹೈದರಾಬಾದ್​ ಅಲ್ಲಿರುವ ವಿಜಯ್ ಅಭಿಮಾನಿಗಳಿಗೋಸ್ಕರ ವಿಶೇಷ ಆರತಕ್ಷತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹೌದು, ಮಾರ್ಚ್ 4ರಂದು ಹೈದರಾಬಾದ್​​ನ ತಾಜ್ ಕೃಷ್ಣಾದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಕೆಲವು ಸಮಯದಿಂದ ಪ್ರೀತಿಸುತ್ತಿದ್ದ ವಿಜಯ್ ಮತ್ತು ರಶ್ಮಿಕಾ ಈಗ ಮದುವೆಯಾಗುತ್ತಿದ್ದಾರೆ. ಅವರ ವಿವಾಹದ ಸುದ್ದಿ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡಿತ್ತು. ಇತ್ತೀಚೆಗೆ, ಅವರಿಬ್ಬರ ನಿಶ್ಚಿತಾರ್ಥ ನಡೆದಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಈ ವಿಷಯದಲ್ಲಿ ಇಲ್ಲಿಯವರೆಗೆ ಯಾವುದೇ ಅಧಿಕೃತ ಘೋಷಣೆ ಬಂದಿರಲಿಲ್ಲ. ಈಗ ಅವರ ಆಮಂತ್ರಣ ಪತ್ರದಿಂದ ಎಲ್ಲವೂ ಅಧಿಕೃತವಾಗಿದೆ.

Leave a Reply

Your email address will not be published. Required fields are marked *