ಅಂಕೋಲಾ ಪುರಸಭೆಯ ‘ಅಕ್ರಮ ಕೂಟ’: ಸಮಾಜ ಸೇವಕನ ಮುಖವಾಡದ ಹಿಂದೆ ಅಡಗಿರುವ ಕರಾಳ ಸತ್ಯ!
ಅಂಕೋಲಾ:ಸಮಾಜ ಸೇವೆಯ ಹೆಸರಿನಲ್ಲಿ ಅಂಕೋಲಾದಲ್ಲಿ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಕೆಲವು ‘ಪುಡಾರಿ’ಗಳ ಅಸಲಿ ಬಣ್ಣ ಈಗ ಬಯಲಾಗುತ್ತಿದೆ. ತಾನೇ ಈ ವ್ಯವಸ್ಥೆಯ ಸರ್ವಾಧಿಕಾರಿ ಎಂದು ಭಾವಿಸಿಕೊಂಡು, ಅಧಿಕಾರಿಗಳನ್ನು ಬೆದರಿಸಿ, ಅಮಾಯಕರನ್ನು ರಸ್ತೆ ಜಗಳಕ್ಕೆ ತಳ್ಳಿ, ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ಬೆಳಂಬಾರ ಮೂಲದ, ಪ್ರಸ್ತುತ ಕೊಗ್ರೆ ಗ್ರಾಮದ ನಿವಾಸಿಯೊಬ್ಬನ ಕುತಂತ್ರದ ಜಾಲ ಈಗ ರಟ್ಟಾಗಿದೆ.
ಈ ವ್ಯಕ್ತಿ ಕೇವಲ ಸುಳ್ಳುಗಾರನಲ್ಲ, ಬದಲಾಗಿ ಸರ್ಕಾರಿ ಕಚೇರಿಗಳಲ್ಲಿ ತನ್ನ ಕುಟುಂಬವನ್ನೇ ಕೂರಿಸಿ ರಾಜ್ಯಭಾರ ಮಾಡಲು ಹೊರಟಿದ್ದಾನೆ..

ಪಿತೃ-ಪುತ್ರಿ ಅಕ್ರಮದ ರೋಚಕ ಕಥೆ!
ಈ ‘ಸೋಗಲಾಡಿ’ ಸಮಾಜ ಸೇವಕನ ಅಸಲಿ ಬಣ್ಣ ಬಯಲಾಗಿದ್ದು ಆತನ ಮಗಳ ಅಕ್ರಮ ನೇಮಕಾತಿಯಿಂದ. ಸರ್ಕಾರಿ ನಿಯಮದ ಪ್ರಕಾರ, ಪೌರಕಾರ್ಮಿಕರು ಕೇವಲ ಅವರಿಗೆ ನಿಗದಿಪಡಿಸಿದ ಕೆಲಸಗಳನ್ನು ಮಾತ್ರ ಮಾಡಬೇಕು. ಪೌರಾಡಳಿತ ನಿರ್ದೇಶನಾಲಯದ ದಿನಾಂಕ: 19/01/2024 ರ ಸುತ್ತೋಲೆ ಅತ್ಯಂತ ಸ್ಪಷ್ಟವಾಗಿದೆ: “ಪೌರಕಾರ್ಮಿಕರನ್ನು ಅನ್ಯ ಕರ್ತವ್ಯಗಳಿಗೆ (ಕಚೇರಿ ಕೆಲಸಕ್ಕೆ) ನಿಯೋಜಿಸುವುದು ಕಾನೂನು ಬಾಹಿರ.”ಆದರೆ, ಈ ವ್ಯಕ್ತಿ ಏನು ಮಾಡಿದ ಗೊತ್ತೇ? ತನ್ನ ಮಗಳನ್ನು ‘ಗಾರ್ಡನರ್’ (ತೋಟಗಾರಿಕೆ) ಹುದ್ದೆಗೆ ನೇಮಕ ಮಾಡಿಸಿ, ಆಕೆಯನ್ನು ಅಂಕೋಲಾ ಪುರಸಭೆಯ ಇಂಜಿನಿಯರಿಂಗ್ ವಿಭಾಗದ ಕಚೇರಿಯಲ್ಲಿ ಕೂರಿಸಿ, ಫೈಲ್‌ಗಳ ಆಡಳಿತ ನಡೆಸುವಂತೆ ನೋಡಿಕೊಂಡಿದ್ದಾನೆ!
ತೋಟಗಾರಿಕೆ ಕೆಲಸಕ್ಕೆ ಬರುವ ವೇತನವನ್ನು ಪಡೆಯುತ್ತಾ, ಕಚೇರಿಯಲ್ಲಿ ಕುಳಿತು ಅಧಿಕಾರದ ದರ್ಪ ಮೆರೆಯುತ್ತಿರುವ ಈ ಪುತ್ರಿ-ಪಿತೃಗಳ ಅಕ್ರಮವನ್ನು ಪ್ರಶ್ನಿಸಿದರೆ, ಈತ ಪತ್ರಕರ್ತರ ಮೇಲೆ ಕೆಂಡಾಮಂಡಲವಾಗುತ್ತಾನೆ. ಯಾಕೆ? ಸತ್ಯ ಹೇಳಿದರೆ ತಾನೇ ಆಕ್ರೋಶ ಬರುವುದು!
2. ಇದು ಸಮಾಜ ಸೇವೆಯೋ ಅಥವಾ ಅರಾಜಕತೆಯೋ?
ಈತನ ‘ಕೋಳಿ ಕಾಲು’ ಅಕ್ಷರಗಳ ಮಾಹಿತಿ ಹಕ್ಕಿನ ಅರ್ಜಿಗಳನ್ನು ನೋಡಿ ಅಂಕೋಲಾ ತಹಶೀಲ್ದಾರ ಕಚೇರಿಯ ಅಧಿಕಾರಿಗಳೇ ತಲೆ ಕೆಡಿಸಿಕೊಂಡಿದ್ದಾರೆ. ಯಾರಿಗೂ ಓದಲು ಬಾರದ, ಅರ್ಥವಿಲ್ಲದ ಅಕ್ಷರಗಳನ್ನು ಬರೆದು, ಮಾಹಿತಿ ಹಕ್ಕಿನ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡುವ ಇವನ ಆಟಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ. ಸ್ವತಃ ತಾನೇ ನಿರ್ದೇಶಕನಾಗಿರುವ ‘ತೋಟಗಾರರ ರೈತ ಉತ್ಪಾದಕ ಕಂಪನಿ’ಯಲ್ಲೇ ಸುಳ್ಳು ವದಂತಿಗಳನ್ನು ಹಬ್ಬಿಸಿ, ಸದಸ್ಯರಿಗೆ ಲಕ್ಷಾಂತರ ರೂಪಾಯಿ ದಂಡ ಬೀಳುತ್ತದೆ ಎಂದು ಹೆದರಿಸಿ, ಅಂತಿಮವಾಗಿ ತನ್ನದೇ ಸಹ ನಿರ್ದೇಶಕರಿಂದ “ಈತ ಒಬ್ಬ ಸುಳ್ಳುಗಾರ” ಎಂದು ಪತ್ರಿಕಾ ಹೇಳಿಕೆ ಕೊಡಿಸಿಕೊಂಡಿದ್ದಾನೆ. ತನ್ನವರೇ ನಂಬದ ವ್ಯಕ್ತಿ ಸಮಾಜದ ಬಗ್ಗೆ ಭಾಷಣ ಮಾಡುವುದು ಎಷ್ಟು ದೊಡ್ಡ ನಾಟಕ?
3. ಅಮಾಯಕರನ್ನು ಬೀದಿಪಾಲು ಮಾಡಿದ ಕೀರ್ತಿ!
ಹೊನ್ನೆಬೈಲ್ ಗ್ರಾಮದಲ್ಲಿ ರಸ್ತೆ ವಿವಾದವನ್ನೇ ಸೃಷ್ಟಿಸಿ, ಪರವಾನಗಿ ಇಲ್ಲದ ಮನೆಗಳಿಗೆ ಪ್ರಚೋದನೆ ನೀಡಿ, ಈಗ ಆ ಮನೆಗಳನ್ನು ಕೆಡವಲು ಪರೋಕ್ಷ ಕಾರಣನಾದ ಈ ವ್ಯಕ್ತಿ, ಇಂದು ಸಮಾಜ ಸೇವಕ ಎಂದು ಕರೆಸಿಕೊಳ್ಳುತ್ತಿರುವುದು ವಿಪರ್ಯಾಸ. ತನ್ನ ಅಜ್ಞಾನದಿಂದ ಪಾಪದ ಜನರನ್ನು ಬೀದಿಗೆ ತಳ್ಳಿ, ಕತ್ತಲಾದ ಮೇಲೆ ಅಕ್ರಮಗಳ ಜೊತೆ ಪಾಳೆಯಗಾರಿಕೆ ನಡೆಸುವ ಈತನ ವ್ಯಕ್ತಿತ್ವವೇ ‘ಕೊಳೆತ’ದ್ದು.
4. ಪತ್ರಕರ್ತರಿಗೆ ಎಚ್ಚರಿಕೆ: ನಮ್ಮದು ಅಚಲ ಹೋರಾಟ!ಈತ ತನ್ನ ಲೇಖನದಲ್ಲಿ ಪತ್ರಿಕೋದ್ಯಮದ ಬಗ್ಗೆ ಮಾತನಾಡಿದ್ದಾನೆ. ಪತ್ರಿಕೋದ್ಯಮವೆಂದರೆ ಸಮಾಜದ ಕನ್ನಡಿ. ಆದರೆ, ನೀನು ಅಕ್ರಮಗಳನ್ನು ಮುಚ್ಚಿಕೊಳ್ಳಲು ಬಳಸುವ ಆ ಕನ್ನಡಿ ಇಂದು ಒಡೆದು ಚೂರುಚೂರಾಗಿದೆ. ನಮ್ಮ ‘ಕ್ರಾಂತಿಕಾರಿ’ ವಾಹಿನಿಯು ಸತ್ಯದ ದಾರಿಯಲ್ಲಿ ನಡೆಯುತ್ತಿದೆ. ಜೀವದ ಭಯ ನಮಗಿಲ್ಲ, ಏಕೆಂದರೆ ನಮ್ಮ ಬೆನ್ನ ಹಿಂದೆ ನ್ಯಾಯವಿದೆ.ನೀನು ಬರೆದ ಆ ಕೋಳಿ ಕಾಲು ಅಕ್ಷರಗಳ ಲೇಖನಕ್ಕೆ ನಮಗಿಂತ ಹೆಚ್ಚು ಉತ್ತರವನ್ನು ಅಂಕೋಲೆಯ ಜನರೇ ನೀಡುತ್ತಿದ್ದಾರೆ. ನಿನ್ನ ಮಗಳ ಅಕ್ರಮ ನೇಮಕಾತಿಯ ದಾಖಲೆಗಳು ಈಗ ಸಾರ್ವಜನಿಕವಾಗಿವೆ. ಇನ್ನು ಎಷ್ಟು ದಿನ ಅಧಿಕಾರಿಗಳ ಮರೆಯಲ್ಲಿ ಬಚ್ಚಿಟ್ಟುಕೊಳ್ಳುತ್ತೀಯಾ?
ಸತ್ಯದ ಮುಂದೆ ನೀನು ನಿಲ್ಲಲಾರೆ. ನಿನ್ನ ತುಕ್ಕು ಹಿಡಿದ ಬುದ್ಧಿಗೆ ಸ್ವಲ್ಪ ಕೆಲಸ ಕೊಡು, ಇಲ್ಲವಾದರೆ ಕಾನೂನಿನ ಉಕ್ಕು ನಿನ್ನನ್ನು ಅರಿಯಲಿದೆ.ನಿನ್ನ ಮುಖವಾಡವನ್ನು ಸಮಾಜದ ಮುಂದೆ ಬೆತ್ತಲೆ ಮಾಡುವವರೆಗೆ ಈ ಕ್ರಾಂತಿ ನಿಲ್ಲುವುದಿಲ್ಲ!













Leave a Reply