.ಯಲ್ಲಾಪುರದಲ್ಲಿ ಅನುಷ್ಠಾನಗೊಳ್ಳಲಿರುವ ಉದ್ದೇಶಿತ ‘Targeted Intervention’ ಯೋಜನೆಗಾಗಿ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಎಜುಕೇಶನ್ ಅಂಡ್ ಸೋಶಿಯಲ್ ವೆಲ್ಫೇರ್ ಸೊಸೈಟಿಯು ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸೊಸೈಟಿಯ ಸಹಯೋಗದೊಂದಿಗೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಯೋಜನೆಯಡಿ ಪ್ರೋಗ್ರಾಂ ಮ್ಯಾನೇಜರ್, ಕೌನ್ಸಿಲರ್, ಅಕೌಂಟೆಂಟ್, ಔಟ್ರೀಚ್ ವರ್ಕರ್ಸ್ ಹಾಗೂ ಪಿಯರ್ ಎಜುಕೇಟರ್ಸ್ ಸೇರಿದಂತೆ ಒಟ್ಟು 30 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಆಸಕ್ತರು ತಮ್ಮ ಇತ್ತೀಚಿನ ಬಯೋಡೇಟಾ ಮತ್ತು ಅಗತ್ಯ ದಾಖಲೆಗಳನ್ನು ಏಪ್ರಿಲ್ 11, 2026ರ ಒಳಗಾಗಿ sjresws92@gmail.com ಇಮೇಲ್ ಅಥವಾ 9380650372 ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಏಪ್ರಿಲ್ 13 ರಂದು ಬೆಳಿಗ್ಗೆ 11 ಗಂಟೆಯಿಂದ ಯಲ್ಲಾಪುರದಲ್ಲಿ ನೇರ ಸಂದರ್ಶನ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 8105280620 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.













Leave a Reply