ಅಂಕೋಲಾದಲ್ಲಿ ಇಂದು (ಮಾ. 11) ವಿದ್ಯುತ್ ವ್ಯತ್ಯಯ.

ಅಂಕೋಲಾ: march 11. ಹೆಸ್ಕಾಂ ಅಂಕೋಲಾ ಉಪ-ವಿಭಾಗದ ವಿವಿಧ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ಹಮ್ಮಿಕೊಳ್ಳಲಾಗಿರುವುದರಿಂದ, ಇಂದು ಬುಧವಾರ, ಮಾರ್ಚ್ 11 ರಂದು ಬೆಳಿಗ್ಗೆ 10:00 ರಿಂದ ಸಂಜೆ 4:00 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಬಾಧಿತ ಪ್ರದೇಶಗಳು: ಅಂಕೋಲಾ, ಸೀಬರ್ಡ್, ವಜ್ರಕೋಶ, ಬೆಲೇಕೇರಿ, ಅಗಸೂರು, ನವಗದ್ದೆ, ವೊಡಾಪೋನ್, ಶಿರಗುಂಜಿ, ಹೊನ್ನಳ್ಳಿ, ಮಾಸ್ತಿಕಟ್ಟೆ, ರಾಮನಗುಳಿ, ಹಡಿನಗದ್ದೆ, ಹಳವಳ್ಳಿ, ಅಂಬಾರಕೊಡ್ಲ, ಗುಂಡಬಾಳ, ವಂದಿಗೆ ಮತ್ತು ಅಗ್ರಗೋಣ ಫೀಡರ್‌ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!