ಅಂಕೋಲಾ: ಮಹಿಳೆಯರ ಸಾಧನೆಯನ್ನು ಗೌರವಿಸುವ ಮತ್ತು ಸಮಾಜದ ಸಾಧಕಿಯರನ್ನು ಗುರುತಿಸುವ ನಿಟ್ಟಿನಲ್ಲಿ, ಅಂಕೋಲಾದ ಖ್ಯಾತ ಅಕ್ಷರಾ ಪಾಲಿ ಕ್ಲಿನಿಕ್ ವತಿಯಿಂದ ದಿನಾಂಕ 08/03/2026 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಅಂಕೋಲಾದ ಹಿರಿಯ ನ್ಯಾಯವಾದಿ ಶ್ರೀಮತಿ ಶಾಂತಾ ನಾರಾಯಣ ಹೆಗಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ಲಿನಿಕ್ನ ಖ್ಯಾತ ವೈದ್ಯೆ ಡಾ. ಸುಮಲತಾ ಅವರು ಶಾಂತಾ ಮೇಡಂ ಅವರಿಗೆ ಶಾಲು ಹೊದಿಸಿ, ಗೌರವಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಶಾಂತಾ ನಾರಾಯಣ ಹೆಗಡೆ ಅವರು, “ಜೀವನದ ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಪಾತ್ರ ಮತ್ತು ಜವಾಬ್ದಾರಿ ಅತ್ಯಂತ ಮಹತ್ವದ್ದು. ಸಮಾಜದ ಸುಧಾರಣೆಯಲ್ಲಿ ಮಹಿಳೆಯರ ಕೊಡುಗೆ ಅನನ್ಯ” ಎಂದು ತಮ್ಮ ವಿಚಾರಗಳನ್ನು ಹಂಚಿಕೊಂಡರು.

ಅಕ್ಷರಾ ಪಾಲಿ ಕ್ಲಿನಿಕ್ ಪ್ರತಿ ವರ್ಷವೂ ಈ ರೀತಿಯಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಅಂಕೋಲಾದ ಜನತೆಗೆ ಅತ್ಯುತ್ತಮ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಈ ಕ್ಲಿನಿಕ್, ಇಂತಹ ಸಾಮಾಜಿಕ ಬದ್ಧತೆಯ ಕಾರ್ಯಕ್ರಮಗಳ ಮೂಲಕವೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಮಾರಂಭದಲ್ಲಿ ಸೋನಿಯಾ ನಾಗೇಶ್ ಗಾಂವಕರ್, ಸಂದೀಪ್ ಗಾಂವಕರ್, ಪ್ರವೀಣ್ ನಾಯ್ಕ್, ವೀಣಾ ನಾಯ್ಕ್, ಪ್ರಜ್ವಲ್, ವಿನಾಯಕ್, ಗಜಾನನ ಬಂಟ್. ಪತ್ರಕರ್ತ ಅರುಣ್ ಶೆಟ್ಟಿ ಹಲವು ಗಣ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು, ಈ ಸಾರ್ಥಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ವರದಿ :ಕಿರಣ ಗಾಂವಕರ ✍️



Leave a Reply