ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಸಮಿತಿ ರಚನೆ: ಜಿಲ್ಲಾಧ್ಯಕ್ಷರಾಗಿ ಗಿರೀಶ ನಾಯಕ ಅಧಿಕಾರ ಸ್ವೀಕಾರ.

ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಸಮಿತಿ ರಚನೆ

​ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಕಮಿಟಿ ರಚನೆಯಾಗಿದ್ದು, ದಿನಾಂಕ 7-04-2026ರಂದು ನೂತನ ಕಮಿಟಿಯ ಪದಗ್ರಹಣ ಕಾರ್ಯಕ್ರಮ ಹಾಗೂ ನಿಕಟಪೂರ್ವ ಕಮಿಟಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಕಾರವಾರ ದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಚುನಾವಣಾ ಅಧಿಕಾರಿಗಳು ನೂತನ ಸಮಿತಿಗೆ ಆಯ್ಕೆ ಪ್ರಮಾಣ ಪತ್ರವನ್ನು ನೀಡಿದರು. ಈ ನೂತನ ಕಮಿಟಿಯ ಜಿಲ್ಲಾಧ್ಯಕ್ಷರಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ ನಾಯಕ ಅವರು ಆಯ್ಕೆಯಾಗಿದ್ದಾರೆ.

ನೂತನ ಸಮಿತಿಯ ಪದಾಧಿಕಾರಿಗಳ ವಿವರ:

ಸಂಘದ ಗೌರವಾಧ್ಯಕ್ಷರಾಗಿ ಮಂಜುನಾಥ ಟಿ.ಸಿ., ಗೌರವ ಸಲಹೆಗಾರರಾಗಿ ಕಿರಣ್ ಕುಮಾರ್ ಎಂ.ಬಿ., ಹಿರಿಯ ಉಪಾಧ್ಯಕ್ಷರಾಗಿ ವಿ.ಎ. ಪಟಗಾರ, ಉಪಾಧ್ಯಕ್ಷರುಗಳಾಗಿ ರಿಯಾಜ್ ಮತ್ತು ಪವಿತ್ರ ತಾರಕರ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ನಜೀರ್ ಸಾಬ್ ಅಕ್ಕಿ, ಖಜಾಂಚಿಯಾಗಿ ಕವನ್ ಕುಮಾರ್ ಆರ್., ಸಂಘಟನಾ ಕಾರ್ಯದರ್ಶಿಗಳಾಗಿ ಗಿರೀಶ್ ತಳವಾರ ಮತ್ತು ಸೀತಾ ಮೇತ್ರಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಜಂಟಿ ಕಾರ್ಯದರ್ಶಿಗಳಾಗಿ ಈರಣ್ಣ ಈಲಾಳ ಮತ್ತು ಶ್ರೀನಿವಾಸ ಮರಾಟೆ, ಸಹ ಕಾರ್ಯದರ್ಶಿಗಳಾಗಿ ರಮೇಶ್ ನಾಯ್ಕ ಮತ್ತು ಸಂತೋಷ್ ಎಳವರ ಕಾರ್ಯನಿರ್ವಹಿಸಲಿದ್ದಾರೆ.

ರಾಜ್ಯ ಪರಿಷತ್ ಸದಸ್ಯರಾಗಿ ಅಣ್ಣಪ್ಪ ಮುಕ್ರಿ, ಕ್ರೀಡಾ ಕಾರ್ಯದರ್ಶಿಯಾಗಿ ನವೀನ್ ನಾಯ್ಕ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಜ್ಞಾ ನಾಯ್ಕ್ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಈರಣ್ಣ ಇರಾಳ ಆಯ್ಕೆಯಾಗಿದ್ದಾರೆ.

​ಪದಗ್ರಹಣದ ನಂತರ ಜಿಲ್ಲಾಧ್ಯಕ್ಷ ಗಿರೀಶ ನಾಯಕ ಅವರ ನೇತೃತ್ವದ ತಂಡವು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಶಾಖಾ ಮುಖ್ಯಸ್ಥರು ಹಾಗೂ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಹಕಾರವನ್ನು ಯಾಚಿಸಿದರು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಒಗಳು ದಕ್ಷತೆಯಿಂದ ಕೆಲಸ ನಿರ್ವಹಿಸಲು ಜಿಲ್ಲಾಡಳಿತವು ಉತ್ತಮ ವಾತಾವರಣವನ್ನು ಕಲ್ಪಿಸಿಕೊಡಬೇಕೆಂದು ಈ ಸಂದರ್ಭದಲ್ಲಿ ವಿನಂತಿಸಲಾಯಿತು.

​ಈ ಸಂಘಟನೆಯು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದ್ದು, ಈ ಹಿಂದೆ ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಗಿರೀಶ ನಾಯಕ ಅವರು ಆರೋಪಿಯನ್ನು ಬಂಧಿಸುವಂತೆ ತೀವ್ರ ಒತ್ತಡ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಜಿಲ್ಲೆಯ ಯಾವುದೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸಮಸ್ಯೆಯಾದಲ್ಲಿ ಅದನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹಾಗೂ ಅಧಿಕಾರಿಗಳ ಬೇಡಿಕೆ ಈಡೇರಿಸಲು ಸಂಘವು ಶ್ರಮಿಸುತ್ತದೆ ಎಂದು ಗಿರೀಶ ನಾಯಕ ಅವರು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವುದು ಸಂಘದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!